

ವಿಜಯಪುರ : ನಗರದ ಎಂಜಿ ರಸ್ತೆಯ ಮಹಾಲಕ್ಷಿ$್ಮ ದೇವಸ್ಥಾನದ ಎದುರಿಗಿನ ಶ್ರೀ ಶಿವಾಜಿ ಮಹಾರಾಜ ಕೋ&ಆಪ್ ಕ್ರೆಡಿಟ್ ಸೊಸಾಯಿಟಿಯ 2023&24ನೇ ಸಾಲಿನ 28ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ. 22 ರಂದು ಬೆಳಗ್ಗೆ 10 ಕ್ಕೆ ಅಥಣಿ ರಸ್ತೆಯಲ್ಲಿನ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಶಾಲಾ ಸಭಾಂಗಣದಲ್ಲಿ ಜರುಗಲಿದೆ.
ಸೊಸಾಯಿಟಿ ಅಧ್ಯಕ್ಷ ಡಾ. ಸದಾಶಿವ ಪವಾರ, ಉಪಾಧ್ಯಕ್ಷ ಶಂಕರ ಕನಸೆ ಅಧ್ಯಕ್ಷತೆ ವಹಿಸುವರು. ನಂತರ ವಿಶೇಷ ಸಾಧನೆ ಮಾಡಿದ ಸಂದ ಸದಸ್ಯರಿಗೆ ಸನ್ಮಾನಿಸುವ ಹಾಗೂ ಸದಸ್ಯರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಮರಾಠಾ ಸಮಾಜದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಸಂದ ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.