ನಾಲ್‌ರೋಡ್ ರಾಮಾಪುರ ಸಂಚಾರ ಅಸ್ತವ್ಯಸ್ತ

20 HANUR 1
ನಾಲ್‌ರೋಡ್ ರಾಮಾಪುರ ಮಾರ್ಗದಲ್ಲಿ ಲಾರಿಯಿಂದ ರಸ್ತೆಗೆ ಕಳಚಿ ಬಿದ್ದಿದ್ದ ಭತ್ತಡ ಮೂಟೆ ಹಾಗೂ ಹರಡಿದ್ದ ಭತ್ತವನ್ನು ತೆರೆವುಗೊಳಿಸುತ್ತಿರುವುದು.
Published on

ಹನೂರು: ತಾಲೂಕಿನ ನಾಲ್‌ರೋಡ್ ರಾಮಾಪುರ ಮಾರ್ಗಮಧ್ಯೆ ಬುಧವಾರ ಲಾರಿಯಿಂದ ಭತ್ತದ ಮೂಟೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಬೆಳಗ್ಗೆ 10ರ ವೇಳೆಯಲ್ಲಿ ತಮಿಳುನಾಡಿನಿಂದ ಭತ್ತ ತುಂಬಿದ ಲಾರಿಯು ಬನ್ನೂರಿನ ರೈಸ್‌ಮಿಲ್‌ನತ್ತ ತೆರಳುತ್ತಿತ್ತು. ಈ ವೇಳೆ ನಾಲ್‌ರೋಡ್ ಮಾರ್ಗದಲ್ಲಿ ಹಗ್ಗ ಸಡಿಲಗೊಂಡ ಪರಿಣಾಮ ಸುಮಾರು 50 ಮೂಟೆಗಳು ರಸ್ತೆಗೆ ಬಿದ್ದಿದ್ದು, ಇದರಲ್ಲಿ ಕೆಲವು ಮೂಟೆಯಲ್ಲಿನ ಭತ್ತ ರಸ್ತೆಗೆ ಹರಡಿತು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಕಾರದಿಂದ ರಸ್ತೆಯಲ್ಲಿ ಹರಡಿದ್ದ ಮೂಟೆ ಹಾಗೂ ಭತ್ತವನ್ನು ತೆರೆವುಗೊಳಿಸಲಾಯಿತು. ಬಳಿಕ ವಾಹನಗಳು ಸಂಚರಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net