ಎನ್ಎಎಲ್ ನಿವೃತ್ತ ವಿಜ್ಞಾನಿ ಸುರೇಶ್ ನಿಧನ

death news mr suresh
Published on

ಮೈಸೂರು: ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬ್(ಎನ್‌ಎಎಲ್) ಮಾಜಿ ಹಿರಿಯ ವಿಜ್ಞಾನಿ ಎಂ.ಆರ್.ಸುರೇಶ್(76) ನಿಧನರಾದರು.

ಮೃತರಿಗೆ ಪುತ್ರ, ಪುತ್ರಿ ಇದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.

ಎಂ.ಆರ್. ಸುರೇಶ್ ಅವರು 80ರ ದಶಕದಲ್ಲಿ ಎನ್‌ಎಎಲ್‌ನಲ್ಲಿ ಆಧುನಿಕ ಕಂಪ್ಯೂಟರ್ ವಿಭಾಗವನ್ನು ಸ್ಥಾಪಿಸಲು ಕಾರಣರಾಗಿದ್ದರು. 35 ವರ್ಷಗಳ ಕಾಲ ಎನ್‌ಎಎಲ್‌ನಲ್ಲಿ ಸೇವೆ ಸಲ್ಲಿಸಿದ್ದರು. ಪತ್ನಿ ನಿಧನದ ಬಳಿಕ ಆಲನಹಳ್ಳಿಯ ವಾಸವಿ ಶಾಂತಿ ಧಾಮದಲ್ಲಿ ನೆಲೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net