ನಾಕುತಂತಿ-ಚಿನ್ನದ ಹಬ್ಬ ನಾಳೆ

fa5f6fa2-7e03-4947-89af-dcefc18f661c
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​, ರಂಗಾಯಣ ಹಾಗೂ ಕುರ್ತಕೋಟಿ ಮೆಮೋರಿಯಲ್​ ಟ್ರಸ್ಟ್​ ಆಶ್ರಯದಲ್ಲಿ ನ. 8ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಾಕುತಂತಿ-ಚಿನ್ನದ ಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸುನಾಥ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ರಾಜು ತಾಳಿಕೋಟಿ, ಪುನರ್ವಸು ಬೇಂದ್ರೆ, ಡಾ. ರಮಾಕಾಂತ ಜೋಶಿ ಆಗಮಿಸಲಿದ್ದಾರೆ. ನಂತರ ನಡೆಯುವ ಮೊದಲ ಗೋಷ್ಠಿಯಲ್ಲಿ ಬೇಂದ್ರೆ ಅವರ ಜ್ಞಾನಪೀಠ ಭಾಷಣ ಕುರಿತು ಡಾ. ಪ್ರಕಾಶ ಗರುಡ, ನಾಕುತಂತಿ ವೈಶ್ವಿಕ ಆಶಯ ಕುರಿತು ಆನಂದ ಝುಂಜರವಾಡ ಪ್ರಬಂಧ ಮಂಡಿಸುವರು. 2ನೇ ಗೋಷ್ಠಿಯಲ್ಲಿ ನಾಕುತಂತಿ ಆರ್ಷೇಯ ದರ್ಶನಗಳು ಕುರಿತು ಡಾ. ಕೃಷ್ಣ ಕಟ್ಟಿ ಮತ್ತು ದ.ರಾ. ಬೇಂದ್ರೆ ಕವಿತೆಯಲ್ಲಿ ತತ್ವಜ್ಞಾನ ಕುರಿತು ಡಾ. ಶ್ರೀರಾಮ ಭಟ್​ ಪ್ರಬಂಧ ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net