ಕೊಲ್ಹಾರ: ಶಿಕ್ಷಕಿ- ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ ವಿರಚಿತ ‘ನಗುವೇ ಸ್ವರ್ಗ’ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ ಸಮಾರಂಭ ಡಿ.14 ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಸ್ವಾಮಿಗಳು, ಬೇಲೂರು-ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ಡಾ.ಅಲ್‌ಹಾಜ್ ಭಕ್ತಿಯಾರಖಾನ ಪಠಾಣ ಸಾನ್ನಿಧ್ಯ ವಹಿಸುವರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸುವರು. ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಉದ್ಘಾಟಿಸುವರು. ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಕೃತಿ ಲೋಕಾರ್ಪಣೆ, ಸಾಹಿತಿ ಗಿರಿಜಾ ಪಾಟೀಲ ಕೃತಿ ಪರಿಚಯ ಮಾಡುವರು ಎಂದು ಅಖಿಲ ಕರ್ನಾಟಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಪಿ ದಳವಾಯಿ ತಿಳಿಸಿದ್ದಾರೆ.