

ಮಂಗಳೂರು : ಮೇರಮಜಲಿನ ಪಕ್ಕಳಪಾದೆ ಸರಸ್ವತಿ ನಗರದ ಸರಸ್ವತಿ ಭಜನಾ ಮಂದಿರದಲ್ಲಿ ಸಮಾಜ ಸೇವಕ, ಪತ್ರಕರ್ತ ದಿ.ನಾಗೇಶ್ ಪಡು ಸ್ಮರಣಾರ್ಥ ನಿರ್ಮಿಸಿದ ನೂತನ ರಂಗ ಮಂಟಪದ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಉದ್ಘಾಟನೆ ಅಂಗವಾಗಿ ನೂತನ ರಂಗ ಮಂಟಪದಲ್ಲಿ ನಡೆದ ಪತ್ರಕರ್ತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಮಹತ್ವದ್ದು. ಅಗಲಿದ ಪತ್ರಕರ್ತ ನಾಗೇಶ್ ಪಡು ಅವರ ಸೇವೆಯನ್ನು ಊರಿನ ಸ್ಮರಿಸಿ ರಂಗಮಂಟಪ ನಿರ್ಮಿಸಿದ್ದು ಪತ್ರಿಕಾ ರಂಗದಲ್ಲೇ ವಿನೂತನ ಇತಿಹಾಸ. ಇದು ಪತ್ರಿಕಾರಂಗಕ್ಕೆ ಸಾಮಾಜಿಕ ಬದ್ಧತೆಯನ್ನು ಕಲಿಸಿಕೊಟ್ಟಿದೆ. ಪತ್ರಕರ್ತನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ
ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್., ಸದಸ್ಯರಾದ ವಿಲ್ಫ್ರೆಡ್ ಡಿಸೋಜಾ, ವಿನಯ ಆಳ್ವ ಬೋಳಿಯಾರ್, ಹರೀಶ್ ಇರಾ ಉಪಸ್ಥಿತರಿದ್ದರು.
ರಂಗಮಂಟಪದ ಉದ್ಘಾಟನೆಯನ್ನು ದಿ.ನಾಗೇಶ್ ಪಡು ಅವರ ಪತ್ನಿ ಜೀವಿತಾ ನಾಗೇಶ್ ನೆರವೇರಿಸಿದರು. ತುಪ್ಪೆಕಲ್ಲು
ಉಳ್ಳಾಕ್ಲು ಮೃಗಂತಾಯಿ ದೈವಸ್ಥಾನದ ಗಡಿಕಾರ ಸದಾನಂದ ಆಳ್ವ ಕಂಪ ಅಧ್ಯಕ್ಷತೆ ವಹಿಸಿದ್ದರು. ಮೇರಮಜಲು ಗ್ರಾಪಂ ಅಧ್ಯಕ್ಷ
ಸತೀಶ್ ನಾಯ್ಗ, ಪಕ್ಕಳಪಾದೆ ಶಾಂತಿಧಾಮ ವೃದ್ಧಾಶ್ರಮದ ಹರೀಶ್ ಪೆರ್ಗಡೆ, ೀರುಂಭ ಭಗವತಿ ಕ್ಷೇತ್ರದ ಕೋಶಾಧಿಕಾರಿ ಉಮೇಶ್ ಬೆಂಜನಪದವು, ಅಧ್ಯಕ್ಷ ವಸಂತ ಬಡ್ಡೂರು ಉಪಸ್ಥಿತರಿದ್ದರು.
ಧಾರ್ಮಿಕ ರಂಗದ ಸೇವೆಗಾಗಿ ಶಿವಪ್ಪ ಸುವರ್ಣ ಮತ್ತು ಪೊಲೀಸ್ ಅಧಿಕಾರಿ ಅರುಣ್ ಕುಮಾರ್ ಪಾದೆಮಾರ್ ಅವರನ್ನು ಸನ್ಮಾನಿಸಲಾಯಿತು. ವಿಶು ಕುಮಾರ್ ಸ್ವಾಗತಿಸಿ, ವಿಶ್ವನಾಥ್ ಪಕ್ಕಳಪಾದೆ ವಂದಿಸಿದರು. ಉಪನ್ಯಾಸಕ ಡಾ. ಅರುಣ್ ಉಳ್ಳಾಲ್
ಕಾರ್ಯಕ್ರಮ ನಿರೂಪಿಸಿದರು.