ಅಧ್ಯಕ್ಷರಾಗಿ ನಾಗೇಂದ್ರ ಆಯ್ಕೆ

5tnp 2
ತಿ.ನರಸೀಪುರ ತಾಲೂಕು ಹೊರಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗೇಂದ್ರ, ಉಪಾಧ್ಯಕ್ಷರಾಗಿ ಕೆ.ಶಿವಣ್ಣ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಎಚ್.ಎಂ.ಗುರುಸ್ವಾಮಿ, ಮಹದೇವಯ್ಯ, ಶಿಳ್ಳೇಗೌಡ, ದೊಡ್ಡಯ್ಯ, ಚಿಕ್ಕಮ್ಮ, ಜಯಶಾಂತಿ, ನಾಗರಾಜಮೂರ್ತಿ, ಆರ್.ಮಾದಯ್ಯ, ನಾಮ ನಿರ್ದೇಶಿತ ಸದಸ್ಯ ಷಡಕ್ಷರಿ ಮತ್ತಿತರರಿದ್ದರು.
Published on

ತಿ.ನರಸೀಪುರ: ತಾಲೂಕಿನ ಹೊರಳಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗೇಂದ್ರ, ಉಧ್ಯಕ್ಷರಾಗಿ ಕೆ.ಶಿವಣ್ಣ ಆಯ್ಕೆಯಾಗಿದ್ದಾರೆ.

ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಂದ್ರ ಹಾಗೂ ನಂಜಯ್ಯ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಶಿವಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾಗೇಂದ್ರ 10 ಮತ ಪಡೆಯುವ ಮೂಲಕ 2 ಮತ ಗಳಿಸಿದ ನಂಜಯ್ಯ ಅವರನ್ನು ಪರಾಭವಗೊಳಿಸಿದರು. ಚುನಾವಣಾಧಿಕಾರಿ ಮಂಜು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಸಂಘದ ನಿರ್ದೇಶಕರಾದ ಎಚ್.ಎಂ.ಗುರುಸ್ವಾಮಿ, ಮಹದೇವಯ್ಯ, ಶಿಳ್ಳೇಗೌಡ, ದೊಡ್ಡಯ್ಯ, ಚಿಕ್ಕಮ್ಮ, ಜಯಶಾಂತಿ,ನಾಗರಾಜಮೂರ್ತಿ, ಆರ್.ಮಾದಯ್ಯ, ನಾಮ ನಿರ್ದೇಶಿತ ಸದಸ್ಯ ಷಡಕ್ಷರಿ, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಚಂದ್ರು, ಶಿವಮಲ್ಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net