ನಗೆ ಹಬ್ಬ ನಾಟಕೋತ್ಸವ 26ರಿಂದ

23 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಅಭಿನಯ ಭಾರತಿ ಹಾಗೂ ಬೆಂಗಳೂರಿನ ಅಂತರಂಗ ಬಹಿರಂಗ ಕಲಾ ತಂಡದ ವತಿಯಿಂದ ಏ. 26 ಮತ್ತು 27 ರಂದು ನಗರದಲ್ಲಿ ನಾಲ್ಕು ನಾಟಕಗಳ ನಗೆ ಹಬ್ಬ ನಾಟಕೋತ್ಸವ ಏರ್ಪಡಿಸಲಾಗಿದೆ ಎಂದು ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 26ರಂದು ಸೃಜನಾ ರಂಗಮಂದಿರಲ್ಲಿ ಸಂಜೆ 4.30ಕ್ಕೆ ವಿಕಾಸ್​ ಎಸ್​. ನಿರ್ದೇಶನದ ಅನುಮಾನದ ಅವಾಂತರ ಮತ್ತು 6.30ಕ್ಕೆ ಭೀಷ್ಮ ರಾಮಯ್ಯ ನಿರ್ದೇಶನದ ಯಥಾಪ್ರಕಾರ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಏ. 27ರಂದು ಸಂಜೆ 4.30ಕ್ಕೆ ವನಿತಾ ರಂಗಾಯಣ ನಿರ್ದೇಶನದ ಬಾಯಿ ತುಂಬಾ ನಕ್ಕು ಬಿಡಿ, 6.30ಕ್ಕೆ ಬಾಷ್​ ರಾಘವೇಂದ್ರ ನಿರ್ದೇಶನದ ಮಿಸ್ಟರ್​ ರಾವ್​ ಅಂಡ್​ ಅಸೋಸಿಯೇಟ್ಸ್​ ಹಾಸ್ಯ ಪ್ರದರ್ಶನವಾಗಲಿದೆ. ನಾಲ್ಕೂ ನಾಟಕಗಳು ಹಾಸ್ಯಮಯವಾಗಿದ್ದು, ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಲಿವೆ ಎಂದರು.

ಹರ್ಷ ಡಂಬಳ, ಸಮೀರ್​ ಜೋಶಿ, ವಿ.ಟಿ ನಾಯಕ್​, ನಾರಾಯಣ ಎಂ., ಜ್ಯೋತಿ ದೀಕ್ಷಿತ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net