ಕರೊನಾ ಭಯ ಬೇಡ, ಮಾಸ್ಕ್ ಧರಿಸಿ

27-1
Published on

ಹೊರ್ತಿ: ನಾಗಠಾಣ ಮತಕ್ಷೇತ್ರದಲ್ಲಿ ಶುಕ್ರವಾರ ದ್ಯಾಬೇರಿ ಗ್ರಾಮದಿಂದ ತರಸೆ ವಸ್ತಿಯವರೆಗೆ ಅಂದಾಜು 35 ಲಕ್ಷ ರೂ.ಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ. ದೇವಾನಂದ ಚವಾಣ್ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಕ್ಷೇತ್ರದ ಎಲ್ಲ ಗ್ರಾಮಗಳು ಸಂಪೂರ್ಣ ಡಾಂಬರೀಕರಣ ರಸ್ತೆಗಳಾಗಿ ಮಾರ್ಪಟ್ಟಿವೆ. ಅಲ್ಲದೆ, ಎಲ್ಲ ಗ್ರಾಮಗಳಿಗೂ ಮೂಲ ಸೌಲಭ್ಯ ಒದಗಿಸಲಾಗಿದೆ. ಇನ್ನುಳಿದ ಕಾಮಗಾರಿಗಳು ಹಂತ ಹಂತವಾಗಿ ನಡೆಯಲಿವೆ ಎಂದರು.
ಕರೊನಾ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಯಾರೂ ಇದಕ್ಕೆ ಹೆದರಬೇಕಾಗಿಲ್ಲ. ಎಲ್ಲರೂ ಮಾಸ್ಕ್, ಪರಸ್ಪರ ಅಂತರ, ಸ್ಯಾನಿಟೈಸರ್ ಉಪಯೋಗಿಸಿ ರೋಗದಿಂದ ದೂರವಿರಬಹುದು ಎಂದರು.
ಚಂದ್ರಶೇಖರ ಅರಕೇರಿ ಮಾತನಾಡಿದರು.
ಅಜೋಬಾ ತರ್ಸೆ, ನಾಮದೇವ ತರಸೆ, ಪಿರಾಜೆ ತರಸೆ, ಸುನೀಲ ನಾಟಿಕಾರ, ಎಂ.ಎಂ. ಮುಲ್ಲಾ, ಪಿ.ಕೆ. ದಾಶ್ಯಾಳ, ಗುತ್ತಿಗೆದಾರ ಎಂ.ಬಿ. ಬೀಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net