ನಾಗಸುಧೆ ದತ್ತಿ

Published on

ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ನಗರ ಹಾಗೂ ನಾಗಸುಧೆ ಜಗಲಿ ಸಂಯುಕ್ತಾಶ್ರಯದಲ್ಲಿ "ನಾಗಸುಧೆ ದತ್ತಿ' ಕಾರ್ಯಕ್ರಮವನ್ನು ನ. 23ರಂದು ಸಂಜೆ 5ಕ್ಕೆ ನಗರದಲ್ಲಿ ಏರ್ಪಡಿಸಲಾಗಿದೆ.

ಹುಬ್ಬಳ್ಳಿಯ ಕಾಳಿದಾಸನಗರದ ನಾಗಸುಧೆ ಟೆರೇಸುನಲ್ಲಿ ದತ್ತಿದಾನಿಗಳಾದ ಸುನಂದಾ ಮತ್ತು ಪ್ರಕಾಶ ಕಡಮೆ ಅವರ ನೇತೃತ್ವದಲ್ಲಿ ಉಪನ್ಯಾಸ ಹಾಗೂ ಕವಿಗೋಷ್ಠಿಗಳು ನಡೆಯಲಿವೆ.
"ಕಾವ್ಯ ಮತ್ತು ಸಾಮಾಜಿಕ ಬದ್ಧತೆ' ಕುರಿತು ಡಾ. ರಂಗನಾಥ ಕಂಟನಕುಂಟೆ ಉಪನ್ಯಾಸ ನೀಡುವರು.

ಕವಿಗೋಷ್ಠಿಯಲ್ಲಿ ಮಹಾಂತಪ್ಪ ನಂದೂರ, ನಿರ್ಮಲಾ ಶೆಟ್ಟರ್, ಚಿದಾನಂದ ಕಮ್ಮಾರ, ಭಾಗ್ಯಜ್ಯೋತಿ ಗುಡಗೇರಿ, ರಂಜಾನ ಕಿಲ್ಲೇದಾರ, ತೇಜಾವತಿ ಎಚ್.ಡಿ. ಭಾಗವಹಿಸುವರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ತಾಲೂಕಾ ಅಧ್ಯಕ್ಷೆ ವಿದ್ಯಾ ವಂಟಮುರಿ ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net