

ಮಂಗಳೂರು: ಬೆಳ್ತಂಗಡಿ ತಾಲೂಕು ಸೋಣಂದೂರು ಗ್ರಾಮದ ಪರ್ಲಾಡಿ ಎಂಬಲ್ಲಿ ಅಪೂರ್ವ ನಾಗಶಿಲೆಗಳು ಪತ್ತೆಯಾಗಿವೆ. ಸೋಣಂದೂರಿನ ಶಿವಣ್ಣ ಗೌಡ ಎಂಬುವರು ಇತ್ತೀಚೆಗೆ ಖರೀದಿಸಿದ ಜಮೀನಿನ ನಾಗಬನದಲ್ಲಿ ಊರಿನವರು ಸೇರಿ ಬನದಲ್ಲಿ ನಾಗ ಪುನಃ ಆರೂಢ ಪ್ರಶ್ನಾವಿಧಿಯ ಬಳಿಕ ಉತ್ಖನನ ಮಾಡಿದಾಗ ಈ ನಾಗಶಿಲೆಗಳು ಪತ್ತೆಯಾಗಿವೆ. ನಾಗ ಯಕ್ಷ ಮತ್ತು ನಾಗ ಯಕ್ಷಿ ಶಿಲೆಗಳು, ಮರಿ ನಾಗನ ಸಹಿತ ಐದು ಹೆಡೆಯ ನಾಗಶಿಲೆ ಮಣ್ಣಿನಡಿ ಪತ್ತೆಯಾಗಿವೆ. ಈ ಶಿಲೆಗಳು 13ನೇ ಶತಮಾನದ ಕಾಲದ್ದು ಎಂದು ಪರಿಣಿತ ಶಿಲ್ಪಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಶಿಲೆಗಳು ಬಳಪದ ಕಲ್ಲಿನಿಂದ ರಚಿಸಲ್ಪಟ್ಟಿವೆ.
ಸ್ಥಳೀಯ ಜೈನ ಮನೆತನದ ಗುತ್ತು ಹಾಗೂ ಅವರ ಅಧೀನದ ನಾಲ್ಕು ಗುತ್ತುಗಳಿಗೆ ಈ ಬನ ಸೇರಿದೆ.