

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಹುಭಾಷಾ ಪಂಡಿತರಾಗಿದ್ದ ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ 20ನೇ ಶತಮಾನದ ಆರಂಭದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದವರು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ವೀರಣ್ಣ ರಾಜೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಗಶೆಟ್ಟಿ ಅವರ ಜ್ಞಾನ ಅಪರಿಮಿತವಾಗಿತ್ತು. ಕನ್ನಡ, ಮರಾಠಿ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿದ್ದರು. ಆಗಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಭಾಷೆಗಳ, ಶಾಸ್ತ್ರಗಳ ಅಧ್ಯಯನ ಮುಖ್ಯವಾಗಿತ್ತು. ಅವರ ಸಾಹಿತ್ಯ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದರು.
ವೀರಪ್ಪ ನಾಗಶೆಟ್ಟಿ ಅವರ ಬದುಕು-ಬರಹ ಕುರಿತು ನಿವೃತ್ತ ಉಪನ್ಯಾಸಕ ವೀರಣ್ಣ ಅಗಳಗಟ್ಟಿ ಮಾತನಾಡಿ, ವೀರಪ್ಪ ಅವರ ಬದುಕು ಸಮಾಜಕ್ಕೆ ಮಾದರಿಯ ಬದುಕು. ಅವರಲ್ಲಿ ಸಮಾಜದ ಬಗ್ಗೆ ಇದ್ದ ಕಳಕಳಿ ಮತ್ತು ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ರೀತಿ ಇಂದಿಗೂ ಮಾದರಿ. ಅವರ ಧರ್ಮಶ್ರದ್ಧೆ ಆದರಣೀಯವಾದದ್ದು. ಹಳಗನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು ಎಂದರು.
ಡಾ. ಎನ್.ಜಿ. ಮಹಾದೇವಪ್ಪ ಅವರಿಗೆ ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಸದಾನಂದ ನಾಗಶೆಟ್ಟಿ, ಎಸ್.ಎಸ್. ನಾಗಶೆಟ್ಟಿ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ಎಸ್.ಎನ್. ಬಣಕಾರ, ಬಿ.ಎಸ್. ಸಂಗಟಿ, ಜಿ.ಬಿ. ಹಳ್ಯಾಳ, ಸಿ.ಎಸ್. ಪಾಟೀಲ, ಸುರೇಶ ಹಿರೇಮಠ, ಮಹಾಂತೇಶ ನರೇಗಲ್, ಮೋಹನ ಪಾಟೀಲ, ರಾಜಶೇಖರ ನಾಗಶೆಟ್ಟಿ, ರತ್ನಾ ಎಲಿಗಾರ, ಪ್ರಭಾವತಿ ನಾಗಶೆಟ್ಟಿ, ಶಿವಾನಂದ ಕೊಟ್ರಶೆಟ್ಟಿ, ಶಂಕರ ಕೋಳಿ, ಎಸ್.ವಿ. ದಳವಾಯಿ, ಜೋತಿ ಭಾವಿಕಟ್ಟಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.