

ಹುಬ್ಬಳ್ಳಿ : ನಗರದ ನಾಗಶೆಟ್ಟಿಕೊಪ್ಪದ ಹಳೇಯ ಕೆರೆಗೆ ಶನಿವಾರ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಕೆರೆ ಅಭಿವೃದ್ಧಿ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ಹಳೇಯ ಕೆರೆಗೆ ಸಮೀಪದ ಮನೆಗಳಿಂದ ಕಲುಷಿತ ನೀರು ಬಂದು ಸಂಗ್ರಹವಾಗುತ್ತಿದ್ದು, ನೀರು ಮಲಿನಗೊಳ್ಳುತ್ತಿದೆ. ಆದ್ದರಿಂದ, ಕಲುಷಿತ ನೀರು ಕೆರೆಗೆ ಸೇರದಂತೆ ಕೈಗೊಂಡಿರುವ ಕಾಮಗಾರಿಯನ್ನು ಗುತ್ತಿಗೆದಾರರು ಶೀಘ್ರ ಮುಗಿಸಬೇಕು ಎಂದು ಶಾಸಕ ಟೆಂಗಿನಕಾಯಿ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಎಲ್ಲ ಶತಮಾನದ ಹಳೇಯ ಕೆರೆಗಳನ್ನು ಸಂರಕ್ಷಿಸಬೇಕು. ಕೆರೆಗಳ ಸುತ್ತಲೂ ಅಭಿವೃದ್ದಿ ಕಾಮಗಾರಿ ಕೈಗೊಂಡು ಸೌಂದಯೀಕರಣ ಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.
ಕೆರೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ, ಅದೇ ರೀತಿ ಹುಬ್ಬಳ್ಳಿ ನಗರದ ವ್ಯಾಪ್ತಿಗೆ ಬರುವ ಎಲ್ಲ ಕೆರೆಗಳನ್ನು ಸಂರಕ್ಷಿಸಬೇಕಿದೆ ಎಂದು ಹೇಳಿದರು.
ಮಹಾಪೌರ ವೀಣಾ ಬರದ್ವಾಡ, ಪಾಲಿಕೆ ಮಾಜಿ ಸದಸ್ಯೆ ಮೇನಕಾ ಹುರಳಿ, ಪ್ರಮುಖರಾದ ಮಂಜುನಾಥ ಹಳ್ಯಾಳ, ಅಶೋಕ ವಾಲ್ಮೀಕಿ, ರಾಜು ಕಾಳೆ, ಪ್ರವೀಣ ಹುರಳಿ, ವಲಯ ನಂ.6 ರ ಸಹಾಯಕ ಆಯುಕ್ತ ಸಿದ್ದಪ್ಪ ಬೆವೂರ ಹಾಗೂ ಇತರರು ಹಾಜರಿದ್ದರು.