

ಗೋಳಿಯಂಗಡಿ: ಆವರ್ಸೆ ಗ್ರಾಮದ ಮಾಡು ಒಲ್ಲದ ನಾಗೇರ್ತಿ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಇತ್ತೀಚೆಗೆ ಸಂಪನ್ನಗೊಂಡಿತು.
ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ತುಲಾಭಾರ ಸೇವೆ, ಮಧ್ಯಾಹ್ನ ಉದ್ಯಮಿ ನಾಗರಾಜ ಶೆಟ್ಟಿಯವರಿಂದ ಸಾರ್ವಜನಿಕ ಮಹಾಅನ್ನಸಂತರ್ಪಣೆ ಸೇವೆ, ರಾತ್ರಿ ಶ್ರೀ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.
ಮೊಕ್ತೇಸರ ವಿಜಯಕುಮಾರ್ ಶೆಟ್ಟಿ ಇಸಾರ್‌ಮಕ್ಕಿ, ಅರ್ಚಕ ಕೃಷ್ಣಮೂರ್ತಿ ಭಟ್ ಕಿರಾಡಿ, ಅಶೋಕ ಹೆಗ್ಡೆ ಬೆಪ್ಡೆ, ಮಂಜುನಾಥ ಹೆಗ್ಡೆ, ಆನಂದ ಶೆಟ್ಟಿ ಆವರ್ಸೆ, ಸೋಮಯ್ಯ ಶೆಟ್ಟಿ, ಭಾಸ್ಕರ ಶೆಟ್ಟಿ, ವೆಂಕಟೇಶ್ ಕುಲಾಲ್, ಸಂತೋಷ ಶೆಟ್ಟಿ ಕೊಣ್ಣಿಮಕ್ಕಿ, ಪ್ರವೀಣ ಕುಲಾಲ, ಅಶೋೀಕ ಕುಲಾಲ, ಭಕ್ತರು ಪಾಲ್ಗೊಂಡಿದ್ದರು.