

ನಗರ್ಲೆ: ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಸಹಕಾರ ಸಂಘ ಅಭಿವೃದ್ಧಿ ಹೊಂದುತ್ತವೆ ಎಂದು ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಹೇಳಿದರು. ನಂಜನಗೂಡು ತಾಲೂಕು ನಗರ್ಲೆ ಗ್ರಾಮದ ನಾಗಮ್ಮ ಶಿವಲಿಂಗಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಉನ್ನತ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಘವನ್ನು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಸಬೇಕು. ಸಂಘವು ಆರ್ಥಿಕವಾಗಿ ಸದೃಢವಾಗಲು ಸಹಕಾರ ನೀಡಬೇಕು ಎಂದು ತಿಳಿಸಿದರು. ವರುಣಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಎಂ.ಮಹದೇವಸ್ವಾಮಿ ಮಾತನಾಡಿ, ಸಂಘವು ಮಾದರಿ ಸಂಘವಾಗಿ ಬೆಳೆಯಲಿ ಎಂದು ಹಾರೈಸಿದರು. ಸಂಘದ ಅಧ್ಯಕ್ಷ ಎನ್.ಎ.ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ತಹಸೀಲ್ದಾರ್ ಆರ್. ಸಿದ್ದಪ್ಪ, ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಸಿದ್ದರಾಜು, ಸಂಘದ ಸಿಇಒ ಭವಾನಿ ಕುಮಾರ್, ನಿರ್ದೇಶಕರಾದ ಚಿನ್ನಸ್ವಾಮಿನಾಯಕ, ಶ್ರೀ
ನಿವಾಸ ಎನ್.ಎಸ್. ಮೋಹನ್ ಕುಮಾರ್, ಎನ್.ಆರ್.ಪ್ರವೀಣ್ ಕುಮಾರ್, ಶಿವರಾಜು, ಚೇತನ್, ಮಂಜುಳಾ, ಲತಾ, ಶಾಂತರಾಜ್ ಹಾಜರಿದ್ದರು.