ನಗರೇಶ್ವರ ದೇವಸ್ಥಾನ ಜೀರ್ಣೋದ್ಧಾರ

13 KMP 02
ಕಂಪ್ಲಿ ನಗರೇಶ್ವರ ದೇವಸ್ಥಾನ ಜೀರ್ಣೋದ್ಧಾರ ನಡೆದಿರುವುದು.
Published on

ಕಂಪ್ಲಿ: ಇಲ್ಲಿನ ಆರ್ಯವೈಶ್ಯ ಸಮುದಾಯದ ನಗರೇಶ್ವರ ದೇವಸ್ಥಾನ ಹಳೆಯದಾಗಿದ್ದರಿಂದ, ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ.

ಬಾಲಾಲಯಗಳನ್ನು ನಿರ್ಮಿಸಿ ನಗರೇಶ್ವರ, ಕನ್ನಿಕಾಪರಮೇಶ್ವರಿ, ಪಾರ್ವತಿ ಮತ್ತು ಗಣೇಶ, ನವಗ್ರಹ ಪುರಾತನ ಪ್ರತಿಮೆಗಳನ್ನು ಕಲಾಕರ್ಷಣೆ ಮಾಡಿ, ಬಾಲಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ನೂತನ ದೇವಸ್ಥಾನ ನಿರ್ಮಿಸಿದ ನಂತರ ಬಾಲಾಲಯಗಳಲ್ಲಿನ ಪ್ರತಿಮೆಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ವಾಸವಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಬಿ.ಕೋಟೇಶ ತಿಳಿಸಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಧರ್ಮಕರ್ತ ಎಣ್ಣಿ ಚಂದ್ರಮೋಹನ ಶ್ರೇಷ್ಠಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net