ನಗರೇಶ್ವರ- ಕನ್ಯಕಾಪರಮೇಶ್ವರಿ ಪ್ರತಿಷ್ಠಾಪನೆ

3 kmp 05
ಕಂಪ್ಲಿ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ನಿಮಿತ್ತ ಬಾಲ ಆಲಯದಲ್ಲಿ ಪ್ರತಿಷ್ಠಾಪಿಸಿ ಪುಷ್ಪಗಳಿಂದ ಶೃಂಗರಿಸಿದ ಕನ್ಯಕಾಪರಮೇಶ್ವರಿ ಪ್ರತಿಮೆ.
Published on

ಕಂಪ್ಲಿ: ಪಟ್ಟಣದ ಆರ್ಯವೈಶ್ಯ ಸಮುದಾಯದ ಶ್ರೀನಗರೇಶ್ವರ, ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನಗಳ ಜೀರ್ಣೋದ್ಧಾರ ನಿಮಿತ್ತ ಬಾಲ ಆಲಯಗಳಲ್ಲಿ ಗಣೇಶ, ಪಾರ್ವತಿದೇವಿ ಸಹಿತ ನಗರೇಶ್ವರ, ಕನ್ಯಕಾಪರಮೇಶ್ವರಿ, ನವಗ್ರಹ ದೇವತಾ ಪ್ರತಿಮೆಗಳ ಪ್ರತಿಷ್ಠಾಪನಾ ಕಾರ್ಯ ಸೋಮವಾರ ನಡೆಯಿತು.

ಬೆಳಗ್ಗೆ 6ಗಂಟೆಗೆ ಗಣಪತಿ ಪೂಜೆಯೊಂದಿಗೆ ಪೂಜಾಕಾರ್ಯಕ್ರಮಗಳನ್ನು ನೆರವೇರಿಸಿ ರೇವತಿ ನಕ್ಷತ್ರ ಮೇಷ ಲಗ್ನದಲ್ಲಿ, ಬಾಲ ಆಲಯಗಳಲ್ಲಿ ಅರ್ಚಕ ರಮಣಬಾಬು ಪೌರೋಹಿತ್ಯದಲ್ಲಿ ದೇವರ ಪ್ರತಿಮೆಗಳನ್ನು ಪ್ರತಿಷ್ಠಾಪನೆಗೊಳಿಸಲಾಯಿತು.

ಪ್ರಧಾನಹೋಮ, ಪೂರ್ಣಾಹುತಿ, ನೀರಾಂಜನ ಮಂತ್ರ, ಮಂತ್ರಪುಷ್ಪ, ಆಶೀರ್ವಚನ, ಅನ್ನದಾನ ಸೇವಾದಿಗಳು ಜರುಗಿದವು. ದೇವತಾ ಪ್ರತಿಮೆಗಳ ಪ್ರತಿಷ್ಠಾಪನಾರ್ಥ ಭಾನುವಾರ ಪುಣ್ಯಾವಹಾಚನ, ಪಂಚಾಮೃತ, ಮಂಟಪಾರಾಧನೆ, ವಾಸ್ತುಪೂಜೆ, ಅಗ್ನಿ ಪ್ರತಿಷ್ಠಾಪನೆ, ವಾಸ್ತುಹೋಮ, ಪಂಚಾಮೃತಾಭಿಷೇಕ, ಮಹಾಶಾಂತಿ ಹೋಮ ನಡೆದವು. ಆರ್ಯವೈಶ್ಯ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಬಿ.ಕೋಟೇಶ್ವರರಾವ್, ಡಿ.ವಿ.ಸತ್ಯನಾಯಣ, ಎಣ್ಣೆ ಮಂಜುನಾಥ, ಪತ್ತಿ ಗಿರಿನಾಥ, ಶ್ರೀನಿವಾಸ್, ಗೋಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net