‘ನಗರಸಭೆ ಸಿಬ್ಬಂದಿ ನಿಯೋಜನೆ ಬೇಡ’

Z LEELA SHESHAMMA
Published on

ಮಡಿಕೇರಿ:

ಮಡಿಕೇರಿ ನಗರಸಭೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಇರುವ ಸಿಬ್ಬಂದಿಯನ್ನು ಸರ್ಕಾರದ ‘ಗೃಹಲಕ್ಷಿö್ಮ’ ಯೋಜನೆಯ ಸೇವೆಗಾಗಿ ನಿಯೋಜಿಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಆರೋಪಿಸಿದ್ದಾರೆ.

ಈ ಸಂಬAಧ ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರಸಭೆಯಲ್ಲಿ ಶೇ.50 ಕ್ಕಿಂತಲೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇದೆ. ಇದರ ನಡುವೆಯೇ ಇರುವ ಸಿಬ್ಬಂದಿಗಳನ್ನು “ಗೃಹಲಕ್ಷಿö್ಮ” ಯೋಜನೆಯೆ ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ನಗರಸಭೆಯ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ. ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಕಷ್ಟ ಹೇಳಿಕೊಳ್ಳಲು ನಗರಸಭೆಗೆ ಬಂದರೆ ಸಿಬ್ಬಂದಿಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

“ಗೃಹಲಕ್ಷಿö್ಮ” ಯೋಜನೆಗೆ ಸರ್ಕಾರ ಹೊರ ಗುತ್ತಿಗೆ ಆಧಾರದಲ್ಲಿ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿ ಅಥವಾ ಈಗಾಗಲೇ ಗೊತ್ತು ಮಾಡಿರುವ ಸೇವಾ ಕೇಂದ್ರಗಳ ಮೂಲಕ ಸೇವೆ ನೀಡಲಿ. ಕೊರತೆಯ ನಡುವೆ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೇ ಮತ್ತೆ ಒತ್ತಡ ಹೇರುವುದು ಸರಿಯಲ್ಲ. ಆಡಳಿತ ವ್ಯವಸ್ಥೆಯ ದ್ವಂದ್ವ ನಿಲುವುಗಳಿಂದಾಗಿ ನಗರದ ಜನತೆ ಕಷ್ಟ ಎದುರಿಸಬೇಕಾಗಿದೆ, ಅರ್ಜಿದಾರರು ಗಾಳಿ, ಚಳಿ, ಮಳೆಯಲ್ಲಿ ಅಲೆದಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ನಗರಸಭಾ ಸಿಬ್ಬಂದಿಗಳನ್ನು “ಗೃಹಲಕ್ಷಿö್ಮ” ಯೋಜನೆಯ ಸೇವೆಯಿಂದ ಮುಕ್ತಗೊಳಿಸಬೇಕು ಮತ್ತು ನಗರಸಭೆಯ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಲೀಲಾ ಶೇಷಮ್ಮ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net