ನಗರಸಭೆ ಪ್ರೌಢಶಾಲೆಯ 1997-98 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

30GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ತಂದೆ ತಾಯಿ, ಭೂಮಿ ಹಾಗೂ ವಿದ್ಯೆ ಕಲಿಸಿದ ಗುರುಗಳ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ಎಂದು ಎಂದು ನಗರ ಸಭೆ ಪ್ರೌಢಶಾಲೆಯ ಪ್ರಾಚಾರ್ಯ ಎಸ್​. ಎಸ್​. ಕುಲಕಣಿರ್ ಹೇಳಿದರು.
ಶಾಲೆಯ 1997-98 ನೇ ಸಾಲಿನವಿದ್ಯಾರ್ಥಿಗಳಿಂದ ಶನಿವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರು ಕರುಣೆಯೊಂದಿದ್ದರೆ ಎಲ್ಲವನ್ನೂ ಗೆಲ್ಲಲೂ ಸಾಧ್ಯ. ಉದ್ಯೋಗ ಇನ್ನಿತರ ಕಾರಣಗಳಿಂದಾಗಿ ಹುಟ್ಟಿದ ಊರು ಬಿಟ್ಟು ಇನ್ನೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡದ ಜೀವನದಲ್ಲಿ ಹುಟ್ಟಿದ ಊರು, ಹೆತ್ತ ತಂದೆ ತಾಯಿಯರನ್ನು ನೆನಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಹಿರಿಯ ವಿದ್ಯಾಥಿರ್ಗಳು ಗುರುಗಳನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ. ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ಸುಂದರ ಣಗಳಿಗೆ ಈ ಕಾರ್ಯಕ್ರಮ ಸಾಯಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಕೆ.ಎಚ್​. ಬೇಲೂರ ಮಾತನಾಡಿ, ವಿದ್ಯಾಥಿರ್ಗಳು ಸಾಮಾಜಿಕ ಕಳಕಳಿ ಹೊಂದಬೇಕು. ನಿಸ್ವಾರ್ಥ ಸೇವೆಯನ್ನು ಸಲ್ಲಿಸುವಂಥವರಾಗಿರಬೇಕು. ಉತ್ತಮ ನಾಗರೀಕರಾಗಿರಬೇಕು. 25 ವರ್ಷಗಳ ಅವಧಿಯ ನಂತರ ನಿಮ್ಮೆಲ್ಲರನ್ನು ನೋಡಿ ಸಂತೋಷವಾಯಿತು ಎಂದರು.
ನಿವೃತ್ತ ಶಿಕ ಎಂ. ಎಂ. ಗುಂಡಣ್ಣವರ ಮಾತನಾಡಿ, ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು. ಆರ್​. ಬಿ. ಗಾರವಾಡ, ಯು. ಎಸ್​. ಬ್ಯಾಳಿ, ಬಿ. ಡಿ. ಪವಾರ ಮಾತನಾಡಿದರು. ಹಳೆಯ ವಿದ್ಯಾಥಿರ್ಗಳಾದ ಮಣಿಕಂಠ ಪಳನಿಸ್ವಾಮಿ, ಸುನೀಲ ಐಹೊಳೆ, ರಾಜು ನರಗುಂದ, ವಸಂತ ಗುಳೇದ, ಮಂಜುಳಾ ಬಡಗಣ್ಣವರ, ಮಂಜುಳಾ ಸೀತಿಮನಿ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net