ಪೌರಕಾರ್ಮಿಕರ ಕ್ರೀಡೋಲ್ಲಾಸ

Sports
Published on

ಚಿತ್ರದುರ್ಗ:ಮೈದಾನವೊಂದರಲ್ಲಿ ಎಲ್ಲಿಲ್ಲದ ಕ್ರೀಡೋಲ್ಲಾಸ. ಅಲ್ಲಿದ್ದ ಪ್ರತಿ ಕ್ರೀಡಾಪಟುಗಳಲ್ಲೂ ಅಂಗಳ ಪ್ರವೇಶಿಸಲು ಕಾತುರ. ಸೂಚನೆ ದೊರೆಯುತ್ತಿದ್ದಂತೆ ಪರಸ್ಪರ ಪೈಪೋಟಿಗೆ ಇಳಿದರು. ಪ್ರೋತ್ಸಾಹಿಸಿದ ಪ್ರೇಕ್ಷಕರು ಚಪ್ಪಾಳೆ ಸುರಿಮಳೆಗೈದರು.

ವಿಶ್ವ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಗುರುವಾರ ಚಿತ್ರದುರ್ಗ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ಕಂಡು ಬಂದ ದೃಶ್ಯವಿದು. ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಹಗ್ಗ-ಜಗ್ಗಾಟ, ಮಡಿಕೆ ಹೊಡೆಯುವುದು, ಲೆಮೆನ್ ಅಂಡ್ ಸ್ಪೂನ್, ಗೋಣಿ ಚೀಲ ಓಟದ ಸೇರಿ ವಿವಿಧ ಸ್ಪರ್ಧೆಗಳು ನಡೆದವು.

ಮಡಿಕೆ ಹೊಡೆಯುವುದರಲ್ಲಿ ವಸಂತಮ್ಮ 1, ಕಮಲ್ಲಮ್ಮ 2, ತಿಪ್ಪಮ್ಮ 3, 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಪದ್ಮಾವತಿ, ವಿದ್ಯಾ 1, ಕಾಮಾಕ್ಷಿ, ವಿಜಯಲಕ್ಷ್ಮಿ 2, ರತ್ನಮ್ಮ, ಯಲ್ಲಮ್ಮ 3, ಗುಂಡು ಎಸೆತದಲ್ಲಿ ಕಾಮಾಕ್ಷಮ್ಮ, ಪದ್ಮಾವತಿ 1, ಮಾಲಮ್ಮ, ವಿಜಯಲಕ್ಷ್ಮಿ 2, ರತ್ನಮ್ಮ, ವೆಂಕಟಲಕ್ಷ್ಮಿ 3, ಲೆಮೆನ್‌ ಅಂಡ್‌ ಸ್ಪೂನ್‌ನಲ್ಲಿ ಮಾಲಮ್ಮ 1, ಹುಲಿಗೆಮ್ಮ 2, ಯಲ್ಲಮ್ಮ 3, ಮ್ಯೂಸಿಕಲ್‌ ಚೇರ್‌ ಸ್ಪರ್ಧೆಯಲ್ಲಿ ವೆಂಕಟಲಕ್ಷ್ಮಿ, ಮಾಲಮ್ಮ, ವಿಜಯಲಕ್ಷ್ಮಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡರು. ದೈಹಿಕ ಶಿಕ್ಷಕರಾದ ಧನಂಜಯರೆಡ್ಡಿ, ಮುಕ್ಕಣ್ಣ, ಜಯಪ್ಪ ತೀರ್ಪುಗಾರರಾಗಿ ಭಾಗವಹಿಸಿದ್ದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಶ್ರೀನಿವಾಸ್‌, ಸದಸ್ಯರಾದ ಹರೀಶ್, ಶಶಿಧರ್,‌ ಅನುರಾಧಾ ರವಿಕುಮಾರ್, ಸೈಯದ್ ನಸ್ರುಲ್ಲಾ, ಪ್ರಭಾರೆ ಪೌರಾಯುಕ್ತ ಎ.ವಾಸಿಂ, ವ್ಯವಸ್ಥಾಪಕಿ ಬಿ.ಆರ್.ಮಂಜುಳಮ್ಮ, ಕಂದಾಯಾಧಿಕಾರಿ ಎನ್.ಚಂದ್ರಶೇಖರ್, ಪರಿಸರ ಇಂಜಿನಿಯರ್‌ ಜೆ.ಜಾಫರ್ ಸಾಬ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಜಣ್ಣ, ಟಿ.ದುರ್ಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net