

ವಿಜಯವಾಣಿ ಸುದ್ದಿಜಾಲ ಗದಗ
ನಗರದ 28ನೇ ವಾಡಿರ್ನ ಬಿಜೆಪಿ ನಗರಸಭೆ ಸದಸ್ಯ ಸಿದ್ದಲಿಂಗಪ್ಪ(ಅನಿಲ್) ಅಬ್ಬಿಗೇರಿ ಅವರ ಜಾತಿ ಪ್ರಮಾಣ ಪ್ರಮಾಣ ಪತ್ರ ರದ್ದು ಮಾಡಿ ಸೆ.7 ರಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಆದೇಶಿಸಿದ್ದಾರೆ.
ಬಿಜೆಪಿ ನಗರ ಮಂಡಳ ಅಧ್ಯಕ್ಷ ಆಗಿರುವ ಅನಿಲ್ ಅಬ್ಬಿಗೇರಿ ಅವರು ನಗರಸಭೆ ಚುನಾವಣೆಯಲ್ಲಿ 22ನೇ ವಾಡಿರ್ನಿಂದ ಸ್ಪಧಿರ್ಸಿ, ಇವರ ಸಮೀಪದ ಸ್ಪಧಿರ್ ಮಹಾಲಕ್ಷಿ$್ಮ ಡಂಬಳ ಎಂಬುವರ ವಿರುದ್ಧ 131 ಅಂತರದಿಂದ ಗೆಲವು ಸಾಧಿಸಿದ್ದರು. ಇವರ ಜಾತಿ ಪ್ರಮಾಣ ಪತ್ರದ ನೈಜತೆ ಕುರಿತು ಮಹಾಲಕ್ಷಿ$್ಮ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರು. ಅಬ್ಬಿಗೇರಿ ಅವರ ಕುಟುಂಬದವರು 2ಎ (ಗಾಣಿಗ) ಜಾತಿಗೆ ಒಳಪಟ್ಟಿಲ್ಲ ಅವರು ಹಿಂದೂ ಲಿಂಗಾಯತರು ಎಂದು ಮಹಾಲಕ್ಷಿ$್ಮ ಅವರ ಆರೋಪವಾಗಿತ್ತು.
ಕಳೆದ ಜು.7 ರಂದು ತಹಸೀಲ್ದಾರ ನೇತೃತ್ವದಲ್ಲಿ ನಡೆದ ಜಂಟಿ ಸ್ಥಳ ತನಿಖಾ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿತ್ತು. ವರದಿ ಅನ್ವಯ ಅನಿಲ ಅಬ್ಬಿಗೇರಿ ಅವರ 2ಎ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ರದ್ದು ಮಾಡಿ ಆದೇಶಿಸಿದ್ದಾರೆ.
ಕಾನೂನು ಸಮರ:
ಜಿಲ್ಲಾಧಿಕಾರಿ ಆದೇಶದ ಪ್ರಶ್ನಿಸಿ ಕಾನೂನು ಸಮರ ಮುಂದುವರಿಸುವುದಾಗಿ ಅನಿಲ ಅಬ್ಬಗೇರಿ ತಿಳಿಸಿದ್ದಾರೆ. ನಗರಸಭೆಯಲ್ಲಿ ಪ್ರಭಾವಿ ಆಗಿರುವ ಹಿನ್ನೆಲೆ ನನ್ನ ವಿರುದ್ಧ ರಾಜಕೀಯ ಷಢ್ಯಂತ್ರ ನಡೆದಿದೆ. ಕಾಂಗ್ರೆಸ್ಸಿನ ಪ್ರಭಾವಿ ನಾಯಕರು ನನ್ನ ವಿರುದ್ಧ ಷಢ್ಯಂತ್ರ ರೂಪಿಸಿದ್ದಾರೆ. ನಗರಸಭೆಯಲ್ಲಿ ಕಾಂಗ್ರೆಸ್ ಆಳ್ವಿಕೆ ತರಲು ಈ ಹುನ್ನಾರ ನಡೆದಿದೆ ಎಂದು ಅನಿಲ ಅಬ್ಬಿಗೇರಿ ಆರೋಪಿಸಿದ್ದಾರೆ.
ರಾಜಕೀಯ ಬದಲಾವಣೆ:
ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಅಬ್ಬಿಗೇರಿ ಮೇಲ್ಮನವಿ ಸಲ್ಲಿಸಲು ಸಿದ್ಧರಾದರೆ, ಆದೇಶಕ್ಕೆ ಪೂರಕವಾಗಿ ಮಹಾಲಕ್ಷಿ$್ಮ ಡಂಬಳ ಅವರು ಅನಿಲ ಅಬ್ಬಿಗೇರಿ ಅವರ ನಗರಸಭೆ ಸದಸ್ಯತ್ವ ರದ್ದು ಕೋರಿ ನ್ಯಾಯಾಲಯ ಮೊರೆ ಹೋಗಬಹುದು ಎಂದು ತಿಳಿದುಬಂದಿದೆ. ಗದಗ ನಗರಸಭೆಯಲ್ಲಿ 17 ಬಜೆಪಿ ಸದಸ್ಯರು, 16 ಕಾಂಗ್ರೆಸ್ ಸದಸ್ಯರಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬೆಳವಣಿಗೆ ನಗರಸಭೆಯಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸಲಿದೆ ಎಂದು ಊಹಿಸಲಾಗಿದೆ.