ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮದ ಆಚರಣೆ : ಶ್ರೀ ಕ್ಷೇತ್ರದಲ್ಲಿ ನಾಗರಾಜನಿಗೆ ವಿಶೇಷ ಪೂಜೆ, ತಂಬಿಲಸೇವೆ

odilu
ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ.
Published on

ಬೆಳ್ತಂಗಡಿ: ತಾಲೂಕಿನಲ್ಲಿ ಶುಕ್ರವಾರ ನಾಗರಪಂಚಮಿ ಹಬ್ಬ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿವಿಧ ದೇಗುಲ, ಸಾರ್ವಜನಿಕ ನಾಗಬನ, ಖಾಸಗಿ ನಾಗಬನಗಳಲ್ಲಿ ನಾಗನಿಗೆ ತನು ಎರೆಯಲಾಯಿತು. ಮಳೆಯೂ ಇಲ್ಲದ ಕಾರಣ ನಾಗಬನಗಳಲ್ಲಿ ಹಾಲೆರೆಯಲು ಅನುಕೂಲವಾಯಿತು.

ಮಚ್ಚಿನ ಗ್ರಾಮದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಳದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವರಿಗೆ ಹಾಲು, ಸೀಯಾಳಾಭಿಷೇಕ, ಹೂ ಸಮರ್ಪಿಸಿದರು. ದೇವಳ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಅರ್ಚಕರು ಉಪಸ್ಥಿತರಿದ್ದರು.

ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಿಸಲಾಯಿತು. ಮುಂಜಾನೆ ಕ್ಷೇತ್ರದ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ಕ್ಷೇತ್ರದ ಒಳಗಿರುವ ನಾಗನ ಮೂಲ ಸನ್ನಿಧಿ(ಹುತ್ತಕ್ಕೆ) ಕ್ಷೀರಾಭಿಷೇಕ ನೆರವೇರಿಸಿ, ತಂಬಿಲಸೇವೆ, ಪೂಜೆ. ಕ್ಷೇತ್ರದ ನಾಗನಕಟ್ಟೆಯಲ್ಲಿ ಕ್ಷೀರಾಭಿಷೇಕ, ತಂಬಿಲ ಸೇವೆ, ವಿಶೇಷ ಪೂಜೆ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಧಾರ್ಮಿಕ ವಿಧಿ ನೆರವೇರಿಸಿದರು.

ದೇವಸ್ಥಾನ ಪ್ರಬಂಧಕ ಗಿರೀಶ್ ಶೆಟ್ಟಿ, ಅಭಿವದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಶ್ರೀ ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ವ್ಯವಸ್ಥಾಪನಾ ಸಮತಿ ಮಾಜಿ ಅಧ್ಯಕ್ಷರಾದ ವಸಂತ ಮಜಲು, ಭುವನೇಶ್ ಗೇರುಕಟ್ಟೆ, ಮಾಜಿ ಸದಸ್ಯರಾದ ಅಂಬಾ ಆಳ್ವ, ದಿನೇಶ್ ಗೌಡ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಈ ಬಸದಿಗೆ ಸಂಬಂಧಿಸಿದ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಸೇವೆ.
ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಈ ಬಸದಿಗೆ ಸಂಬಂಧಿಸಿದ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಸೇವೆ.

ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಈ ಬಸದಿಗೆ ಸಂಬಂಧಿಸಿದ ನಾಗಬನದಲ್ಲಿ ವಿಶೇಷ ಸೇವೆ ನಡೆಯಿತು. ಬಸದಿ ಆನುವಂಶಿಕ ಆಡಳಿತ ಮುಖ್ಯಸ್ಥ ಕೆ.ಜಯವರ್ಮರಾಜ್ ಬಳ್ಳಾಲ್ ಮಾರ್ಗದರ್ಶನದಲ್ಲಿ ವಿಧಿವಿಧಾನ ನೆರವೇರಿತು. ಬಸದಿಗೆ ಸಂಬಂಧಿಸಿದ ಶ್ರಾವಕ ಮತ್ತು ಶ್ರಾವಿಕೆಯರು ಉಪಸ್ಥಿತರಿದ್ದು, ಸಹಕರಿಸಿದರು. ಪೂಜಾ ವಿಧಿವಿಧಾನ ಬಸದಿ ಪ್ರಧಾನ ಅರ್ಚಕ ಜಯರಾಜ್ ಇಂದ್ರ ನೆರವೇರಿಸಿದರು.

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ ದೇವಳ ಪ್ರಧಾನ ಅರ್ಚಕ ಶ್ರೀನಿವಾಸ ಉಪಾಧ್ಯಾಯ ನೇತೃತ್ವದಲ್ಲಿ ನಡೆಯಿತು. ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ, ಸದಸ್ಯರಾದ ಗಣೇಶ್ ಕೋಟ್ಯಾನ್, ಶ್ರೀನಿವಾಸ ಕುಲಾಲ್, ಭಕ್ತರು ಉಪಸ್ಥಿತರಿದ್ದರು.

ಕಲ್ಮಂಜ ಗ್ರಾಮದ ಕುಡೆಂಚಿ ಸಾರ್ವಜನಿಕ ನಾಗಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ ನಡೆಯಿತು. ಕನ್ಯಾಡಿ -1 ಗ್ರಾಮದ ಕೇಳ್ತಾಜೆ ನಾಗಭನದಲ್ಲಿ ಸಾರ್ವಜನಿಕ ಪಂಚಮಿ ನೆರವೇರಿತು. ಕೊಲ್ಲಿ ಶ್ರೀ ಹರಿ ಭಟ್ ಪೂಜಾ ತಂಬಿಲ ನೆರವೇರಿಸಿದರು. ಸ್ಥಳೀಯರಾದ ಪ್ರಸನ್ನ ಕುಮಾರ್ ಡಿ.ಆರ್.ಇದ್ದರು.

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ ಕಾರ್ಯಕ್ರಮ.
ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ ಕಾರ್ಯಕ್ರಮ.

ಕೊಯ್ಯೂರಿನ ಮಾವಿನಕಟ್ಟೆ ಪರಂಗಡಿ ನಾಗಬನದಲ್ಲಿ ನಾಗತಂಬಿಲಸೇವೆ ಅಶೋಕ್ ಕುಮಾರ್ ಬಾಂಗಿನ್ನಾಯರಿಂದ ಗ್ರಾಮಸ್ಥರ ಸೇರುವಿಕೆಯಿಂದ ನಡೆಯಿತು. ಬಳಂಜ ಶ್ರೀ ಪಂಚಲಿಂಗೇಶ್ವರ ದೇಗುಲದಲ್ಲಿ ನಾಗಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ ನಡೆಯಿತು.

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ, ಶ್ರೀ ನಾಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಮಂಗಳ ಗಿರಿ ಮುಂಡೂರಿನಲ್ಲಿ ನಾಗರಪಂಚಮಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಶ್ರೀ ನಾಗಬ್ರಹ್ಮ ದೇವರಿಗೆ ತನು ತಂಬಿಲ ವಿಶೇಷ ಪೂಜೆ ನಡೆಯಿತು. ಬೆಳಗ್ಗೆ ನಾಗಕಲ್ಲುರ್ಟಿ ದೈವಸ್ಥಾನ ಹಾಗೂ ಶ್ರೀ ನಾಗಾಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ. ಬಳಿಕ ನಾಗದೇವರಿಗೆ ಆಡಳಿತ ಮೊಕ್ತೇಸರ ರಾಜೀವ ಅವರ ನೇತೃತ್ವದಲ್ಲಿ ತನು ತಂಬಿಲ ವಿಶೇಷ ಪೂಜೆ ನಡೆಯಿತು. ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ, ಸದಸ್ಯರು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net