ಭಕ್ತರಿಂದ ಹಾಲು ಪಾಯಸ ವಿತರಣೆ

milk
ರವಿದೊಡ್ಡಬಳ್ಳಾಪುರ ಸಹಾಯಧನ ಹಸ್ತಾಂತರಿಸಿದರು. ಪ್ರಮುಖರಾದ ಹರೀಶ್ ಇಂಜಾಡಿ, ಕಿಶೋರ್ ಕುಮಾರ್ ಅರಂಪಾಡಿ, ರವಿ ಕಕ್ಕೆಪದವು, ಆನಂದ್ ದೇವರಗದ್ದೆ ಉಪಸ್ಥಿತರಿದ್ದರು.
Published on

ಸುಬ್ರಹ್ಮಣ್ಯ: ನಾಗರಪಂಚಮಿಯ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ಥಳೀಯ ಭಕ್ತರು, ಕ್ಷೇತ್ರಕ್ಕೆ ಆಗಮಿಸಿದವರಿಗೆ ರಥಬೀದಿಯಲ್ಲಿ ಹಾಲು ಪಾಯಸ ವಿತರಿಸಿದರು.

ನಾಗರಾಜನಿಗೆ ಹಾಲು ಪಾಯಸ ಅತ್ಯಂತ ಪ್ರಿಯವಾದುದರಿಂದ ಹಲವಾರು ವರ್ಷದಿಂದ ಈ ಸೇವೆಯನ್ನು ಸ್ಥಳೀಯ ಭಕ್ತರು ನೆರವೇರಿಸುತ್ತಾ ಬರುತ್ತಿದ್ದಾರೆ.

ಬಸ್ ಏಜೆಂಟ್ ರವಿಕುಮಾರ್ ದೊಡ್ಡಬಳ್ಳಾಪುರ, ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ, ಪ್ರಮುಖರಾದ ಕಿಶೋರ್ ಕುಮಾರ್ ಅರಂಪಾಡಿ, ಕಾರ್ತಿಕ್ ಉಡುದೋಳಿ, ದಿನೇಶ್ ಎಣ್ಣೆಮಜಲು, ದಿನೇಶ್ ಮಾಸ್ಟರ್, ಗೋಪಾಲ ಎಣ್ಣೆಮಜಲು, ರವಿ ಕಕ್ಕೆಪದವು, ಆನಂದ ದೇವರಗದ್ದೆ, ವಸಂತ ಮಂಗಳೂರು, ಭರತ ದೇವರಗದ್ದೆ, ಗುರುಪ್ರಸಾದ ಪಂಜ, ಕುಸುಮಾಧರ, ಆರಾಧನಾ ಮತ್ತು ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ-ಮಾಲೀಕರ ಸಂಘದ ಸದಸ್ಯರು ಸಹಕರಿಸಿದರು.

ಈ ಸೇವೆಗೆ ಬೇಕಾದ ಖರ್ಚು ಕಳೆದು ಉಳಿತಾಯವಾದ 10000 ರೂ.ನಲ್ಲಿ 5 ಸಾವಿರ ರೂ.ವನ್ನು ಯುವ ತೇಜಸ್ಸು ಚಾರಿಟೆಬಲ್ ಟ್ರಸ್ಟ್‌ನ ಆಂಬುಲೆನ್ಸ್‌ಗೆ ಮತ್ತು 5 ಸಾವಿರ ರೂ.ವನ್ನು ದೇವರಗದ್ದೆಯ ಕುಂಡ ಅವರಿಗೆ ಸಹಾಯಧನವಾಗಿ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net