ಚುನಾವಣಾಧಿಕಾರಿಯಾಗಿ ನಾಗರಾಜ್ ನೇಮಕ

Published on

ಬಳ್ಳಾರಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28 ನೇ ಸಾಲಿನ ಆಡಳಿತ ಮಂಡಳಿಯ ರಾಜ್ಯ ಮತ್ತು ಜಿಲ್ಲಾ ಘಟಕಕ್ಕೆ ಚುನಾವಣೆ

ಪ್ರಕ್ರಿಯೆ ಅಕ್ಟೋಬರ್ 13 ರಿಂದ ಆರಂಭಗೊಳ್ಳಲಿದೆ.

ಕಾನಿಪ ಜಿಲ್ಲಾ ಚುನಾವಣಾಧಿಕಾರಿಯನ್ನಾಗಿ ರಾಜ್ ನ್ಯೂಸ್ ವಾಹಿನಿಯ ಜಿಲ್ಲಾ ಹಿರಿಯ ವರದಿಗಾರ ಎಸ್. ನಾಗರಾಜ್ ಅವರನ್ನು ನೇಮಕ ಮಾಡಿ ರಾಜ್ಯ ಚುನಾವಣಾಧಿಕಾರಿ ಎನ್. ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಚುನಾವಣಾ ಪ್ರಕ್ರಿಯೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯಲು ಸೇರಿದಂತೆ ನಾನಾ ಮತದಾನ ಪ್ರಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net