ನಾಗರಬೆಟ್ಟ ಏತ ನೀರಾವರಿ ಯೋಜನೆ ಶೀಘ್ರ ಲೋಕಾರ್ಪಣೆ

Nagarabetta Lift Irrigation Project, C.S. Nadagowda, Nalatwada, Soap and Detergent Corporation, Chimmalagi,
ನಾಲತವಾಡ ಸಮೀಪದ ಅಮರೇಶ್ವರ ದೇವಸ್ಥಾನ ಹತ್ತಿರ ಕಾಲುವೆಯ ರಸ್ತೆ ಸೇತುವೆಯ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎಸ್.ನಾಡಗೌಡ ಭೂಮಿಪೂಜೆ ನೆರವೇರಿಸಿದರು. ಪೃಥ್ವಿರಾಜ ನಾಡಗೌಡ, ವಿಜಯಲಕ್ಷ್ಮೀ ಇಳಕಲ್ಲ, ಬಸವರಾಜ ಗಡ್ಡಿ, ರಾಯನಗೌಡ ತಾತರೆಡ್ಡಿ ಇತರರಿದ್ದರು.
Published on

ನಾಲತವಾಡ: ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡೇಟ್ ಪಡೆದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಸಮೀಪದ ಅಮರೇಶ್ವರ ದೇವಸ್ಥಾನದ ಹತ್ತಿರ ಚಿಮ್ಮಲಗಿ ಏತನೀರಾವರಿ ಯೋಜನೆಯ ವಿತರಣಾ ಕಾಲುವೆಯ ರಸ್ತೆ ಸೇತುವೆಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಮ್ಮಲಗಿ ಏತನೀರಾವರಿ ಯೋಜನೆಯ ಪೂರ್ವಕಾಲುವೆಯ ವಿತರಣಾ ಕಾಲುವೆಯ ಸಂಖ್ಯೆ 13ಎ ದಲ್ಲಿನ 19.6 ಕಿ.ಮೀ.ದಲ್ಲಿ ರಸ್ತೆಗೆ ಅಡ್ಡಲಾಗಿ ಅಂದಾಜು ಮೊತ್ತ 35.67ಲಕ್ಷ ರೂ. ವೆಚ್ಚದಲ್ಲಿ ಕಾಲುವೆಯ ರಸ್ತೆ ಸೇತುವೆಯ ನಿರ್ಮಾಣ ಕಾಮಗಾರಿ ಮಾಡಲಾಗುವುದು. ನಮ್ಮ ಸರ್ಕಾರದಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

ಪ.ಪಂ ಮಾಜಿ ಅಧ್ಯಕ್ಷ, ಸದಸ್ಯ ಪೃಥ್ವಿರಾಜ ನಾಡಗೌಡ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷ ಬಸವರಾಜ ಗಡ್ಡಿ, ಗುತ್ತಿಗೆದಾರ ರಾಯನಗೌಡ ತಾತರೆಡ್ಡಿ, ಮುಖಂಡರಾದ ಗುರುಪ್ರಸಾದ ದೇಶಮುಖ, ಅಮರೇಶ ದೇಶಮುಖ, ಉಮರಪಾರುಕ್ ಮೂಲಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ವೈ.ಎಚ್.ವಿಜಯಕರ್, ಮಹಾಂತೇಶ ಗಂಗನಗೌಡರ, ಮುತ್ತು ಗೊರಬಾಳ, ಪ.ಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಸದಸ್ಯರಾದ ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಅಂಬ್ರಪ್ಪ ಶೀರಿ, ಲಲಿತಾ ಗೊರಬಾಳ, ರಾಜಬಿ ನಾಡದಾಳ, ಯಮನವ್ವ ಬಂಡಿವಡ್ಡರ, ಸಂಗಮೇಶ ಗಂಗನಗೌಡರ, ಕೆಬಿಜೆಎನ್‌ಎಲ್ ಎಇ ಅಬುಬಕರ ಬಾಗವಾನ, ಜೆಇ ಸುನೀಲಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net