ಬಿಜೆಪಿ ಸದಸ್ಯರಿಂದ ನಗರಸಭೆಗೆ ದೂರು - ಮಳೆಗಾಲಕ್ಕೆ ತಯಾರಿ ಕಾಮಗಾರಿ ಅಸಮರ್ಪಕ ಆರೋಪ

PTR_4 JUL_1
Published on

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವತಯಾರಿ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ನಗರಸಭೆಯ ಬಿಜೆಪಿ ಬೆಂಬಲಿತ ಸದಸ್ಯರು ಗುರುವಾರ ಆಡಳಿತಾಽಕಾರಿಗೆ ಪೌರಾಯುಕ್ತರ ಮೂಲಕ ಮನವಿ ಸಲ್ಲಿಸಿದರು.


ಮಳೆಗಾಲದ ಪೂರ್ವಭಾವಿಯಾಗಿ ನಗರಸಭೆಯಿಂದ ನಡೆಯುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ, ಚರಂಡಿ ಸ್ವಚ್ಛತೆ, ರಸ್ತೆ ಬದಿಯ ಗಿಡಂಗಂಟಿಗಳ ತೆರವು ಕಾರ್ಯವಾಗಿಲ್ಲ. ೧೫ನೇ ಹಣಕಾಸು ಯೋಜನೆ ಅನುದಾನದ ಕ್ರೀಯಾಯೋಜನೆ ಮಾಡುವ ಮುಂಚಿತವಾಗಿ ಸದಸ್ಯರ ಗಮನಕ್ಕೆ ತರಬೇಕು. ನಗರೋತ್ಥಾನ ಯೋಜನೆ, ನಗರಸಭಾ ನಿಽಯ ಮೂಲಕ ವಾರ್ಡ್‌ಗಳಿಗೆ ನೀಡಲಾಗುವ ಅನುದಾನದ ಹಂಚಿಕೆಯಲ್ಲಿ ವಾರ್ಡ್‌ನ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಬೇಕು. ಜಲಸಿರಿಯ ಸಾರ್ವಜನಿಕ ದೂರುಗಳ ಬಗ್ಗೆ ಗಮನ ಹರಿಸಬೇಕು. ಜಿಲ್ಲಾಽಕಾರಿಗಳ ಅಥವಾ ಅವರು ಸೂಚಿಸಿದ ಅಽಕಾರಿಗಳ ನೇತೃತ್ವದಲ್ಲಿ ತಿಂಗಳಿಗೊಂದು ಸಾಮಾನ್ಯ ಸಭೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಮಸ್ಯೆಗಳಿಗೆ ೭ ದಿನದ ಒಳಗೆ ಪರಿಹಾರ ಸೂಚಿಸದೆ ಹೋದರೆ, ನಗರಸಭೆ ಮುಂಭಾಗ ಧರಣಿ ಕೂರುವ ಎಚ್ಚರಿಕೆ ನೀಡಿದ್ದಾರೆ.


ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಮನವಿಯಲ್ಲಿ ಹೇಳಿದ ವಿಚಾರವನ್ನು ಜಿಲ್ಲಾಽಕಾರಿಗಳ ಗಮನಕ್ಕೆ ತರಲಾಗುವುದು. ಸಾಮಾನ್ಯ ಸಭೆ ನಡೆಸುವ ವಿಚಾರದ ಬಗ್ಗೆ ಜಿಲ್ಲಾಽಕಾರಿಗಳಲ್ಲಿ ಪ್ರಸ್ತಾಪ ಮಾಡಿ, ಅವರು ಸೂಚಿಸಿದ ಅಽಕಾರಿಗಳ ಮೂಲಕ ಅಗತ್ಯ ಕ್ರಮಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.


ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ. ಜೀವಂಧರ್ ಜೈನ್, ಸದಸ್ಯರಾದ ಪಿ. ಜಿ. ಜಗನ್ನಿವಾಸ ರಾವ್, ವಿದ್ಯಾ ಆರ್ ಗೌರಿ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ, ಲೀಲಾವತಿ, ಸುಂದರ ಪೂಜಾರಿ ಬಡಾವು, ಪ್ರೇಮ್ ಕುಮಾರ್, ರಮೇಶ್ ರೈ, ಪ್ರೇಮ ನಂದಿಲ, ಪದ್ಮನಾಭ ನಾಯ್ಕ್, ಸಂತೋಷ ಕುಮಾರ್, ನವೀನ್ ಪೆರಿಯತ್ತೋಡಿ, ಇಂದಿರಾ ಆಚಾರ್ಯ, ಮನೋಹರ್ ಕಲ್ಲಾರೆ, ಬಾಲಚಂದ್ರ ಕೆಮ್ಮಿಂಜೆ, ಮಮತಾ ರಂಜನ್, ಪೂರ್ಣಿಮಾ, ವಸಂತ ಕಾರೆಕ್ಕಾಡು, ಪದ್ಮನಾಭ ನಾಯ್ಕ್, ದೀಕ್ಷಾ ಪೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net