ಜಲಸಿರಿ ಯೋಜನೆ ನಿರ್ಲಕ್ಷ್ಯ -  ಪುತ್ತೂರು ನಗರಸಭೆ ಸಾಮಾಣ್ಯ ಸಭೆಯಲ್ಲಿ ಆರೋಪ -  ಸೂಕ್ತ ಕ್ರಮಕ್ಕೆ ಆಗ್ರಹ

PTR_31 JUL_2
Published on

ಪುತ್ತೂರು: ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು.

ಕುಡಿಯುವ ನೀರಿನ ನೆಕ್ಕಿಲಾಡಿ ಅಣೆಕಟ್ಟು ಗೇಟು ತೆರೆಯುವಲ್ಲಿ ಜಲಸಿರಿ ಯೋಜನೆಯವರು ನಿರ್ಲಕ್ಷ್ಯ ವಹಿಸಿದ ಕಾರಣ ಹೂಳು ತುಂಬಿಕೊಂಡು ಬೇಸಿಗೆಯ ೯ ತಿಂಗಳು ಪುತ್ತೂರಿಗೆ ನೀರೊದಗಿಸಲು ಸಾಧ್ಯವಿಲ್ಲ. ನಮ್ಮ ಅವಽಯಿರುವುದು ಮೂರು ತಿಂಗಳು ಮಾತ್ರ ನಮಗೆ ಸಮಸ್ಯೆಯಿಲ್ಲದಿದ್ದರೂ ಮುಂದಿನ ದೃಷ್ಟಿಕೋನದಿಂದ ಮಾತನಾಡಿತ್ತಿದ್ದೇವೆ. ಪೌರಾಯುಕ್ತೆ ತಕ್ಷಣ ಸ್ಥಳ ತನಿಖೆ ನಡೆಸಿ ವರದಿ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು.

೭೫ ಮೀಟರ್ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸುವ ಸ್ಥಳವನ್ನು ಮೊದಲು ಬೀರಮಲೆ ಬೆಟ್ಟದಿಂದ ಸುರಕ್ಷತೆಯ ನೆಪ ನೀಡಿ ನೆಲ್ಲಿಕಟ್ಟೆ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರಧ್ವಜಕ್ಕೆ ವಿಶೇಷ ಗೌರವ ಇದ್ದು, ನಿರ್ವಹಣೆಯೂ ಅಗತ್ಯ. ಈ ನಿಟ್ಟಿನಲ್ಲಿ ಸೂಕ್ತ ಸ್ಥಳ ನೋಡುವುದು ಉತ್ತಮ. ಹಾಗಾಗಿ ಸಹಾಯಕ ಆಯುಕ್ತರು, ಪೌರಾಯುಕ್ತರು, ನಗರಸಭೆ ಅಧ್ಯಕ್ಷೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಗರಸಭೆಯಲ್ಲಿ ಹಲವು ಕಾಮಗಾರಿಗಳ ಟೆಂಡರ್ ಆಗಿ ಅನುಮೋದನೆ ಆಗಿದೆ. ಫೆಬ್ರವರಿ ಮಾರ್ಚ್ ತಿಂಗಳ ಘಟನ್ನೋತ್ತರ ಮಂಜೂರಾತಿ ಕಾಮಗಾರಿ ಕೆಲವು ಕಡೆ ಇನ್ನೂ ಆಗಿಲ್ಲ. ಗುತ್ತಿಗೆದಾರರಿಗೆ ಇಂಜಿನಿಯರ್ ಹೇಳಿದರೂ ಯಾವುದೇ ಕಾರ್ಯರೂಪಕ್ಕೆ ಬರುತ್ತಿಲ್ಲ. ಈಗ ಮಳೆಗಾಲ ಎಂದು ಹೇಳಿದರೂ ಮಳೆಗಾಲದ ಮೊದಲೇ ಮಂಜೂರಾತಿ ಸಿಕ್ಕಿದೆ. ಈ ಕೆಲಸ ಯಾವಾಗ ಪ್ರಾರಂಭಿಸುತ್ತಾರೆಂಬುದನ್ನು ಸ್ಪಷ್ಟಪಡಿಸಬೇಕು. ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗುವ ವಿಚಾರದಲ್ಲೂ ಅಽಕಾರಿಗಳಿಂದ ತುರ್ತು ಸ್ಪಂದನೆ ಲಭಿಸುತ್ತಿಲ್ಲ ಎಂದು ಸದಸ್ಯರು ದೂರಿದರು.

ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ನೂತನ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಉಪಸ್ಥಿತರಿದ್ದರು.

ಪೌರ ಕಾರ್ಮಿಕರು ಬೇಕು

ಮೂರು ಮಂದಿ ನೇರಪಾವತಿ ಪೌರ ಕಾರ್ಮಿಕರ ಹುದ್ದೆಗೆ ೧೪ ಅರ್ಜಿ ಬಂದಿದ್ದು, ಮೂವರನ್ನು ಸೇರಿಸುವುದು ಸರಿಯಾಗಿದೆ. ಆದರೆ ನಗರಸಭೆ ಪೌರ ಕಾರ್ಮಿಕರ ಅಗತ್ಯೆ ಇದೆ. ಹಾಗಾಗಿ ಉಳಿದ ೧೧ ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ತೆರೆಯುವ ನಿರ್ಣಯ ಮಾಡಬೇಕೆಂದು ಎಂದು ಸದಸ್ಯರು ಆಗ್ರಹಿಸಿದರು.

ಚರಂಡಿ ಕೆಲಸವಾಗಿಲ್ಲ!

ತೆಂಕಿಲದಲ್ಲಿ ಜಲಸಿರಿಯ ಟ್ಯಾಂಕ್‌ಗೆಂದು ಮೀಸಲಿಟ್ಟ ೧.೬೫ ಎಕರೆ ಸ್ಥಳ ಜಲಸಿರಿಗೆ ಅಗತ್ಯ ಬೀಳುತ್ತಿಲ್ಲ. ಅಽಕಾರಿಗಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೆಚ್ಚುವರಿ ಸ್ಥಳವನ್ನು ಆಶ್ರಯ ಯೋಜನೆ ಬಿಡುವಂತೆ ಮನವಿ ಮಾಡಲಾಯಿತು. ಮಳೆಗಾಲದ ಚರಂಡಿ ಕ್ಲೀನಿಂಗ್ ಇನ್ನೂ ಆಗಿಲ್ಲ. ಕಲ್ಲಾರೆಯಲ್ಲಿ ಚರಂಡಿ ಕ್ಲೀನಿಂಗ್ ಶೇ.೬೦ ಮಾತ್ರ ಆಗಿದೆ. ಟೆಂಡರ್ ಪಡೆದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು.

ತೆಂಗಿನ ಮರ ತೆರವುಗೊಳಿಸಿ

ಬನ್ನೂರು ಮಹಾಲಕ್ಷ್ಮೀ ಮಂದಿರ ಬಳಿ ಖಾಸಗಿ ವ್ಯಕ್ತಿಗೆ ಸೇರಿದ ತೆಂಗಿನ ಮರದಿಂದಾಗಿ ದೊಡ್ಡ ವಾಹನ ಸಂಚಾರಕ್ಕೆ ತೊಡಕಾಗಿದೆ. ಕಸ ಸಂಗ್ರಹಿಸುವ ವಾಹನಕ್ಕೂ ತೊಂದರೆ ಆಗಿದ್ದು, ಮರ ತೆರವು ಮಾಡಲು ಜು.೨೨ರಂದು ದೂರು ನೀಡಿದೆ. ಆದರೆ ನಗರಸಭೆಯಿಂದ ಅಽಕಾರಿಗಳು ನೋಟಿಸ್ ನೀಡುವಲ್ಲೇ ಸಮಯ ಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net