

ಪುತ್ತೂರು: ನಗರಸಭೆಯ ಎರಡನೇ ಅವಽಗೆ ಅಧ್ಯಕ್ಷರಾಗಿ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಬಾಲಚಂದ್ರ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನದ ಮೀಸಲಾತಿ ಪರಿಶಿಷ್ಟ ಜಾತಿ ಮಹಿಳೆಯಾಗಿರುವುದರಿಂದ ಸದಸ್ಯರಾದ ಶಶಿಕಲಾ ಸಿ.ಎಸ್ ಮತ್ತು ಲೀಲಾವತಿ ಅವರಿಗೆ ಮಾತ್ರ ಅವಕಾಶವಿತ್ತು. ಬಿಜೆಪಿಯಿಂದ ಲೀಲಾವತಿ ಅಣ್ಣು ನಾಯ್ಕ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆಯಂತೆ ಅಧ್ಯಕ್ಷ ಸ್ಥಾನ ಪಡೆದುಕೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗವಾಗಿದ್ದ ಹಿನ್ನಲೆಯಲ್ಲಿ ಪಿ. ಜಿ. ಜಗನ್ನಿವಾಸ ರಾವ್, ಬಾಲಚಂದ್ರ, ಸುಂದರ ಪೂಜಾರಿ ಹೆಸರು ಕೇಳಿ ಬರುತ್ತಿದ್ದಾರೂ ಪಕ್ಷದ ಸೂಚನೆಯಂತೆ ಬಾಲಚಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿಇಲ್ಲದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಽಸಲು ಅವಕಾಶವಿತ್ತು. ಅದರೆ ಕಾಂಗ್ರೆಸ್ ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಸ್ಪಽಸದ ಕಾರಣ ಅವಿರೋಧ ಆಯ್ಕೆಯಾದರು.
ಉಪವಿಭಾಗಾಽಕಾರಿ ಜುಬಿನ್ ಮೊಹಾಪಾತ್ರ ಚುನಾವಣಾಽಕಾರಿದ್ದರು. ತಹಸೀಲ್ದಾರ್ ಪುರಂದರ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸಹಕರಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದರು ಮತ್ತಿತರರು ಉಪಸ್ಥಿತರಿದ್ದರು.