ಸೆ.೩ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Published on


ಪುತ್ತೂರು: ನಗರಸಭೆಯ ಎರಡನೇ ಅವಽಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸೆ. ೩ರಂದು ಚುನಾವಣೆ ಘೋಷಿಸಿ ಪುತ್ತೂರು ಎಸಿ ಜುಬಿನ್ ಮೊಹಾಪಾತ್ರ ಆದೇಶ ಹೊರಡಿಸಿದ್ದಾರೆ.


ಪುತ್ತೂರು ನಗರಸಭೆ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ ೧೨.೩೦ ರಿಂದ ೧.೩೦ ರ ತನಕ ನಾಮಪತ್ರ ಸಲ್ಲಿಸಲು ಅವಕಾಶ, ೨.೩೦ ರಿಂದ ೩ರವರೆಗೆ ನಾಮಪತ್ರ ಪರಿಶೀಲನೆ, ೩ ರಿಂದ ೩.೧೫ ರವರೆಗೆ ಕ್ರಮಬದ್ಧವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ, ೩.೧೫ ರಿಂದ ೩.೩೦ ರವರೆಗೆ ನಾಮಪತ್ರ ವಾಪಸಾತಿಗೆ ಅವಕಾಶ, ಅಗತ್ಯ ಬಿದ್ದ್ದಲ್ಲಿ ೩.೩೦ ರ ಬಳಿಕ ಚುನಾವಣೆ ನಡೆಯಲಿದೆ.


ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿದೆ. ನಗರಸಭೆಯಲ್ಲಿ ಹಾಲಿ ಬಿಜೆಪಿ ಬೆಂಬಲಿತ ೨೫, ಕಾಂಗ್ರೆಸ್ ಬೆಂಬಲಿತ ೫ ಹಾಗೂ ಎಸ್ಡಿಪಿಐ ಬೆಂಬಲಿತ ೧ ಚುನಾಯಿತ ಸದಸ್ಯರಿದ್ದಾರೆ. ದ. ಕ. ಸಂಸದರು ಹಾಗೂ ಪುತ್ತೂರು ಶಾಸಕರಿಗೆ ಮತ ಚಲಾವಣೆಯ ಹಕ್ಕು ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net