ಕೊಪ್ಪಳದಲ್ಲಿ ನಾಗರಾಜನಿಗೆ ಹಾಲಿನ ಅಭಿಷೇಕ

nagara panchami festival celebrtaion in koppal
Published on

ಕೊಪ್ಪಳ: ನಾಗರ ಪಂಚಮಿ ಅಂಗವಾಗಿ ನಗರ, ಭಾಗ್ಯನಗರ ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಗುರುವಾರ ಹುತ್ತ ಹಾಗೂ ನಾಗ ಶಿಲೆಗೆ ಹಾಲೆರೆವ ಮೂಲಕ ಮಹಿಳೆಯರು ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಿದರು.

ಬಿತ್ತನೆ ಕಾರ್ಯ ಮುಗಿದಿದ್ದು ರೈತಾಪಿ ವರ್ಗ ಮಳೆರಾಯನ ನಿರೀೆಯಲ್ಲಿದೆ. ಇದೇ ಅವಧಿಯಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬ ಗ್ರಾಮೀಣ ಮಹಿಳೆಯರ ಪಾಲಿಗೆ ವಿಶೇಷ. ಬುಧವಾರ ರೊಟ್ಟಿ ಹಬ್ಬ ಆಚರಿಸಿದ್ದು, ನೆರೆಹೊರೆಯವರೊಂದಿಗೆ ಪರಸ್ಪರ ಬಗೆ ಬಗೆ ರೊಟ್ಟಿ ವಿನಿಮಯ ಮಾಡಿಕೊಳ್ಳುವ ಮೂಲಕ ಮೂರು ದಿನದ ಹಬ್ಬಾಚರಣೆ ಆರಂಭವಾಗಿದೆ. ಗುರುವಾರ ಬೆಳಗ್ಗೆಯಿಂದಲೇ ಕೊಪ್ಪಳ, ಭಾಗ್ಯನಗರ ಪಟ್ಟಣ ಮತ್ತು ಗ್ರಾಮೀಣ ಭಾಗದ ದೇವಾಲಯಗಳಲ್ಲಿ ನಾಗ ದೇವನಿಗೆ ಹಾಗೂ ಹುತ್ತಗಳಲ್ಲಿ ಹಾಲೆರೆದರು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ನಾಗರಾಜನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.

ಗ್ರಾಮೀಣ ಭಾಗದಲ್ಲಿ ಜೋಕಾಲಿ ಕಟ್ಟುವ ಪದ್ಧತಿ ಮುಂದುವರೆದಿದ್ದು, ಮರಗಳಿಗೆ ಜೋಕಾಲಿ ಕಟ್ಟಿ ಮಕ್ಕಳು ಸಂಭ್ರಮದಿಂದ ಜೀಕಿದರು. ಹಬ್ಬ ಹಿನ್ನೆಲೆ ನಗರದಲ್ಲಿ ಮಣ್ಣಿನಿಂದ ಮಾಡಿದ ನಾಗದೇವರ ಮೂರ್ತಿಗಳ ಮಾರಾಟ ಜೋರಾಗಿ ಕಂಡುಬಂತು. ಶುಕ್ರವಾರ ಮರಿನಾಗನಿಗೆ ಹಾಲೆರೆವ ಮೂಲಕ ಪಂಚಮಿ ಆಚರಣೆ ಕೊನೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net