ಗ್ರಾಮೀಣ ಭಾಗದಲ್ಲಿ ನಾಗಪಂಚಮಿ ಆಚರಣೆ

Published on

ಸುಬ್ರಹ್ಮಣ್ಯ: ಗ್ರಾಮೀಣ ಭಾಗಗಳಲ್ಲಿ ನಾಗರಪಂಚಮಿಯನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು. ನಾಯರ್‌ಕೆರೆ, ಬಳ್ಪ, ಏನೆಕಲ್, ಕೊಲ್ಲಮೊಗ್ರ, ಬೆಂಡೋಡಿ, ಮೊಗ್ರ, ಕಮಿಲ, ಸುಬ್ರಹ್ಮಣ್ಯದ ನೂಚಿಲ, ದೇವರಗದ್ದೆ, ಇಂಜಾಡಿ, ಹೊಸೋಳಿಕೆ, ಏನೆಕಲ್, ಬೀದಿಗುಡ್ಡೆ, ಪಲ್ಲೋಡಿ, ಹರಿಹರ, ಬಾಳುಗೋಡು, ಬಿಳಿನೆಲೆ, ನೆಟ್ಟಣ, ಕೈಕಂಬ, ಚೇರು, ಪಳ್ಳಿಗದ್ದೆ, ಕುಲ್ಕುಂದ, ಇಂಜಾಡಿ ಮೊದಲಾದೆಡೆ ನಾಗನ ಕಟ್ಟೆಗಳಿಗೆ ತನು ಸಮರ್ಪಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು. ಅಲ್ಲದೆ ನಾಗರಾಜನಿಗೆ ಸೀಯಾಳ, ಹೊದುಲು, ತೆಂಗಿನ ಕಾಯಿ, ಹೂ ಹಣ್ಣು ಸಮರ್ಪಿಸಲಾಯಿತು.

ಐನೆಕಿದು ಸಮೀಪದ ಕೆದಿಲದಲ್ಲಿನ ನಾಗನಕಟ್ಟೆಯಲ್ಲಿ ಪೂಜೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net