ಸಡಗರದಿಂದ ನಾಗರಪಂಚಮಿ ಆಚರಣೆ

raichur
raichur
Published on

ರಾಯಚೂರು ನಗರ ಸೇರಿ ಜಿಲ್ಲಾಧ್ಯಂತ ಸೋಮವಾರ ನಾಗರಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆಮಂದಿಯಲ್ಲ ಸೇರಿ ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ನಾಗದೇವರಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ನಗರದ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂತಿರ್ಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಹಾಲರೆದು, ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಈ ವೇಳೆ ಕೆಲವರು ಇದು ನನ್ನ ಪಾಲು, ಇದು ತಂದೆ, ತಾಯಿ, ಅಜ್ಜ, ಅಜ್ಜಿ, ಅಕ್ಕ ಹಾಗೂ ಅಣ್ಣ ಹಾಗೂ ತಮ್ಮನ ಪಾಲು ಎಂದು ಹೇಳುವ ಮೂಲಕ ಹಾಲೆರೆದು ಧನ್ಯ ಮೆರೆದರು. ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು. ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿ ಇನ್ನಿತರ ಉಂಡಿಗಳನ್ನು ನೈವೇದ್ಯವಾಗಿ ಅಪಿರ್ಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.


ಅಲ್ಲದೆ ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net