

ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಭ್ರಮದ ನಾಗರ ಪಂಚಮಿ ಮಂಗಳವಾರ ನಡೆದಿದ್ದು, ಸುಮಾರು 10ಸಾವಿರಕ್ಕೂ ಅಕ ನಾಗತಂಬಿಲ ಸೇವೆ ನಡೆಯಿತು.
ಶ್ರೀ ಕ್ಷೇತ್ರಕ್ಕೆ ಬೆಳಗ್ಗೆ 5ಗಂಟೆಯಿಂದಲೇ ಭಕ್ತಾದಿಗಳು ಆಗಮಿಸಲು ಆರಂಭಿಸಿದ್ದು, ಇಡೀ ದಿನ 50ಸಾವಿರಕ್ಕೂ ಅಕ ಮಂದಿ ದೇವರ ದರ್ಶನ ಪಡೆದರು. ಬೆಳಗ್ಗೆ 5.30ಕ್ಕೆ ನಾಗಬನದಲ್ಲಿ ಶ್ರೀ ವಾಸುಕೀ ನಾಗರಾಜ ದೇವರಿಗೆ ಧಾರ್ಮಿಕ ಕಾರ್ಯಕ್ರಮಗಳು, 6.30ಕ್ಕೆ ತಂಬಿಲ ಸೇವೆಗಳು ಆರಂಭವಾದವು. ನಾಗದೇವರಿಗೆ ಹಿಂಗಾರ, ಕೇದಗೆ, ಸಂಪಿಗೆ, ಹೂ ಭಕ್ತರಿಂದ ಅರ್ಪಣೆಗೊಂಡಿತು. 50ಸಾವಿರಕ್ಕೂ ಅಕ ಸೀಯಾಳ, 10ಸಾವಿರಕ್ಕೂ ಅಕ ನಾಗತಂಬಿಲ, 500ಕ್ಕೂ ಅಕ ಕ್ಷೀರಾಭಿಷೇಕ, 5ಸಾವಿರಕ್ಕೂ ಅಕ ಪಂಚಾಮೃತ ಅಭಿಷೇಕ ಸೇವೆ ನಡೆಯಿತು. ಮಧ್ಯಾಹ್ನ 12ಸಾವಿರಕ್ಕೂ ಅಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಶ್ರೀದೇವರ ಚಾಂದ್ರಶಾಲೆಯಲ್ಲಿ ವಿಶೇಷ ಅಲಂಕಾರಯುಕ್ತ ಕಲ್ಪೋಕ್ತ ಪೂಜೆಯೊಂದಿಗೆ ಆಶ್ಲೇಷಬಲಿ ಜರುಗಿತು.
ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಅನುವಂಶಿಕ ಮೊಕ್ತೇಸರರಾದ ಕೆ. ಬಾಲಕೃಷ್ಣ ಕಾರಂತ್, ಕೆ. ಮನೋಹರ ಭಟ್, ಮೊಕ್ತೇಸರ ಭಾಸ್ಕರ ಕೆ., ಕಾರ್ಯನಿರ್ವಹಣಾಕಾರಿ ಪ್ರವೀಣ್, ಕೃಷ್ಣರಾಜ ತಂತ್ರಿ, ದಿನೇಶ್ ಪೆಜತ್ತಾಯ, ರವೀಂದ್ರ ಕೌಡೂರು, ಸೋಮಶೇಖರ ಭಟ್, ಪ್ರಕಾಶ್ ಭಟ್, ಸುಜನ್‌ದಾಸ್ ಕುಡುಪು, ಉದಯ ಕುಮಾರ್, ಉದಯಕುಮಾರ್ ರಾವ್, ವಾಸುದೇವರಾವ್ ರಾವ್ ಕುಡುಪು, ರಾಘವೇಂದ್ರ ಭಟ್ ಕುಡುಪು, ಚಂದ್ರಹಾಸ ರೈ, ಉಮೇಶ್ ಶೆಟ್ಟಿಘಿ, ಸುಂದರ ಶೆಟ್ಟಿ, ಸುದರ್ಶನ್ ಕುಡುಪು ಉಪಸ್ಥಿತರಿದ್ದರು.
ವಾಹನ ದಟ್ಟಣೆ ಹೆಚ್ಚು: ನಾಗರ ಪಂಚಮಿ ಉತ್ಸವಕ್ಕೆ ನಾಗಮೂಲಸ್ಥಾನಕ್ಕೆ ತೆರಳುವ ಹಿನ್ನಲೆಯಲ್ಲಿ ಬೆಳಗ್ಗಿನ ಹೊತ್ತು ವಾಹನದಟ್ಟಣೆ ಹೆಚ್ಚಿತ್ತು. ಅದರಲ್ಲೂ ನಗರದ ನಂತೂರು, ಕೊಟ್ಟಾರ, ಪಂಪ್‌ವೆಲ್‌ನಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಕೆಲವು ಶಾಲಾ-ಕಾಲೇಜುಗಳಿಗೆ ಆರ್‌ಎಚ್ (ರಿಸ್ಟ್ರಿಕ್ಟೆಡ್ ಹಾಲಿಡೇ) ನೀಡಲಾಗಿತ್ತು.