ನಗರ ಭಜನಾ ಉತ್ಸವಕ್ಕೆ ಚಾಲನೆ

Upp_Bhajane
Published on

ಉಪ್ಪಿನಂಗಡಿ: ಇಳಂತಿಲದ ವಾಣಿಶ್ರೀ ಭಜನಾ ಮಂಡಳಿಯ ನಗರ ಭಜನಾ ಉತ್ಸವ ಮನೆ ಮನೆ ಭಜನಾ ಸಂಕೀರ್ತನೆಗೆ ಶುಕ್ರವಾರ ವಾಣಿಶ್ರೀ ಭಜನಾ ಮಂದಿರದಲ್ಲಿ ಚಾಲನೆ ಪಡೆಯಿತು.

ವಿನೋದರ ಸಾಲಿಯಾನ್ ಪಿಲಿಕ್ಕಲ್ ನಗರ ಭಜನಾ ಉತ್ಸವ ಉದ್ಘಾಟಿಸಿ ಮಾತನಾಡಿ, ಭಗವಂತನ ನಾಮ ಸ್ಮರಣೆಯಿಂದ ದೊರೆಯುವ ನೆಮ್ಮದಿ ಒಂದೆಡೆಯಾದರೆ ಮನೆ ಮನೆಗೆ ತೆರಳಿ ಭಜನಾ ಸಂಕೀರ್ತನೆ ಮಾಡುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ವಾಣಿಶ್ರೀ ಭಜನಾ ಮಂದಿರದ ಅಧ್ಯಕ್ಷ ಹರೀಶ್ ಗೌಡ ಪೊಟ್ಟುಕೆರೆ, ಕಾರ್ಯದರ್ಶಿ ಶಿವರಾಮ ಗೌಡ, ಪ್ರಮುಖರಾದ ಹೊನ್ನಪ್ಪ ಪೊಟ್ಟುಕೆರೆ, ಪದ್ಮನಾಭ ಭಟ್, ಪ್ರದೀಪ್, ಗಂಗಾಧರ ಆಚಾರ್ಯ, ರವೀಂದ್ರ ಆಚಾರ್ಯ, ಗಿರೀಶ್ ಆಚಾರ್ಯ, ರಮೇಶ್, ತಿಮ್ಮಪ್ಪ ಶೆಟ್ಟಿ, ಗಣೇಶ್ ಭಟ್ ಮೂಡಾಜೆ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net