ಕಾವಲು ಪ್ರದೇಶದಲ್ಲಿ ನಾಗರ ಪಂಚಮಿ

CLK POOJE 2
Published on

ಚಳ್ಳಕೆರೆ: ತಾಲೂಕಿನ ದೊಡ್ಡಚೆಲ್ಲೂರು ಕಾವಲು ಪ್ರದೇಶದಲ್ಲಿ ನಾಗರ ಪಂಚಮಿ ಹಬ್ಬವನ್ನು ಚಳ್ಳಕೆರೆ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯವರು ಸೋಮವಾರ ಆಚರಿಸಿದರು.

ಕಾಡುಗೊಲ್ಲರ ಆರಾಧ್ಯ ದೇವರಾದ ರಂಗಸ್ವಾಮಿ, ಯತ್ತಪ್ಪಸ್ವಾಮಿ ದೇವರನ್ನು ಗೊಲ್ಲರಹಟ್ಟಿಯ ದೇವಸ್ಥಾನದಿಂದ 35 ಕಿಮೀ ದೂರದ ಕಾವಲು ಪ್ರದೇಶಕ್ಕೆ ಕರೆದೊಯ್ದು ವಿಶೇಷವಾಗಿ ಆಚರಣೆ ಮಾಡಲಾಯಿತು.

ನಾಗರ ಕಲ್ಲುಗಳಿಗೆ ಹಾಲು ಎರೆದು, ಬೆಳ್ಳಿ ಆಭರಣ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು. ಹರಕೆವೊತ್ತ ಭಕ್ತರು ಅನ್ನಸಂತರ್ಪಣೆ ವಿವಿಧ ಸೇವಾ ಕಾರ್ಯ ಪೂರೈಸಿದರು. ಮಕ್ಕಳ ತಲೆಗೂದಲು ಸಲ್ಲಿಸಲಾಯಿತು.

ಪೂಜಾರಿ ಯರ‌್ರಪ್ಪ, ಭಕ್ತರಾದ ಗೌಡರ ಚಿಕ್ಕಣ್ಣ, ರಾಜಣ್ಣ, ರಂಗನಾಥ, ಅಜ್ಜಯ್ಯ, ಮಂಜುನಾಥ, ಅಜ್ಜಯ್ಯ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net