ಹಾವಿನ ಹುತ್ತಕ್ಕೆ ಹಾಲೆರೆದ ಭಕ್ತರು

mkg
Published on

ಹರಿಹರ: ಶ್ರಾವಣ ಮಾಸದ ಮೊದಲ ನಾಗರ ಪಂಚಮಿ ಹಬ್ಬವನ್ನು ತಾಲೂಕಿನಾದ್ಯಂತ ಜನರು ಕುಟುಂಬ ಸಮೇತರಾಗಿ ನಾಗರ ಕಟ್ಟೆ, ನಾಗರ ಹಾವಿನ ಮೂರ್ತಿ ಹಾಗೂ ಹಾವಿನ ಹುತ್ತಕ್ಕೆ ಹಾಲೆರೆಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ನಾಗಚೌತಿಯ ಭಾನುವಾರದಂದು ನಗರದ ವಿವಿಧ ದೇವಸ್ಥಾನದಲ್ಲಿರುವ ನಾಗರಕಟ್ಟೆಗಳಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಗರದ ಹೊರವಲಯದಲ್ಲಿರುವ ಹುತ್ತಗಳಿಗೆ ಕೆಲವರು ಹಾಲೆರೆದರೆ, ಇನ್ನು ಕೆಲವರು ಹುತ್ತದ ಮಣ್ಣಿನಿಂದ ನಾಗರ ಹಾವಿನ ಮೂರ್ತಿ ತಯಾರಿಸಿ ಮನೆಯಲ್ಲಿಯೇ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.

ನಾಗಪ್ಪನ ಮೂರ್ತಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಮನೆಯಲ್ಲಿಯೇ ತಯಾರಿಸಿದ ಶೇಂಗಾ, ಎಳ್ಳು, ರವೆ, ಕಡ್ಲೆ ಸೇರಿದಂತೆ ವಿವಿಧ ಬಗೆಯ ಉಂಡೆಗಳನ್ನು ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net