ಪಂಚಮಿ ದಿನವೇ ಮನೆಗೆ ಬಂದ ನಾಗಪ್ಪ!

21 LXR SNAKE
Published on

ಲಕ್ಷ್ಮೇಶ್ವರ: ನಾಗರಪಂಚಮಿ ದಿನ ಕಲ್ಲಿನ ನಾಗರ ಮೂರ್ತಿಗೆ ಹಾಲೆರೆಯುವದು ಸಾಮಾನ್ಯ. ಆದರೆ, ಪಟ್ಟಣದ ನಿವಾಸಿಯೊಬ್ಬರ ಮನೆಯಲ್ಲಿ ಪಂಚಮಿ ದಿನವೇ ನಾಗರಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತ್ತು.

ಪಟ್ಟಣದ ಜಂತ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಅವರ ಮನೆಯಲ್ಲಿ 5 ಅಡಿ ಉದ್ದದ ನಾಗರ ಹಾವು ಬಂದಿತ್ತು. ಇದನ್ನು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಮನಿಸಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು, ಕೆಲಹೊತ್ತು ಆಟವಾಡಿಸಿ, ಬಾಟಲಿಯಿಂದ ಅದಕ್ಕೆ ನೀರು ಕುಡಿಸಿದರು. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net