ನಾಗಪಂಚಮಿ ಶಕ್ತಿ ಪ್ರದರ್ಶನ

IMG_20230821_172558
Published on

ಕಲಬುರಗಿ: ತಾಲೂಕಿನ ಮೇಳಕುಂದಾ ಬಿ ಗ್ರಾಮದಲ್ಲಿ ನಾಗರ ಪಂಚಮಿ ನಿಮಿತ್ತ ಗ್ರಾಮದ ಯುವಕ ಸಿದ್ಧಾರೂಢ ಉದನೂರ ಬೃಹತ್ ಕಲ್ಲಿನ ಗುಂಡು ಎತ್ತಿ ಶಕ್ತಿ ಪ್ರದರ್ಶಿಸಿದರು.
ನಾಗಪಂಚಮಿ ನಿಮಿತ್ತ ಯುವಕರು ವಿವಿಧ ಸ್ಫರ್ಧೆಯನ್ನು ಏರ್ಪಡಿಸಿ ತಮ್ಮ ಶಕ್ತಿ ಪಣಕ್ಕೆ ಇಟ್ಟರು.
ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿನ ಸುಮಾರು 120 ಕೆ.ಜಿ.ಗಿಂತ ಹೆಚ್ಚು ಬಾರದ ಕಲ್ಲು ಗುಂಡು ಎತ್ತಿದ ಸಿದ್ಧಾರೂಢ ಉದನೂರ ಶಕ್ತಿ ಪ್ರದರ್ಶಿಸಿ, ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net