ನಾಗರ ಮೂರ್ತಿಗೆ ಹಾಲಿನ ಅಭಿಷೇಕ

21 NRD-2
Published on

ನರಗುಂದ: ಪಟ್ಟಣ ಸೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಸೋಮವಾರ ನಾಗಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಮಹಿಳೆಯರು ದೇವಸ್ಥಾನಗಳ ಎದುರಿನ ನಾಗರ ಮೂರ್ತಿಗಳಿಗೆ ಹಾಲಿನ ಅಭಿಷೇಕ ಮಾಡಿ, ಅರಿಷಿಣದ ದಾರ ಕಟ್ಟಿ ಭಕ್ತಿಯಿಂದ ಪೂಜಿಸಿದರು. ಕೆಲವು ಕಡೆಗಳಲ್ಲಿ ಜನರು ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ನಮಿಸಿದರು. ಹಬ್ಬಕ್ಕಾಗಿ ಮಾಡಿರುವ ಅರಳು, ಉಂಡೆ ಹಾಗೂ ವಿವಿಧ ಸಿಹಿ ಪದಾರ್ಥಗಳನ್ನು ನಾಗದೇವತೆಗೆ ನೈವೇದ್ಯ ಮಾಡಿ ಪುನೀತರಾದರು. ಹೆಂಗಳೆಯರು ಜೋಕಾಲಿ ಜೀಕಿ ಸಂಭ್ರಮಪಟ್ಟರು. ಈರಣ್ಣ ನವಲಗುಂದ, ಶಂಭು ಹಂಚಿನಾಳ, ಮಹಾಂತೇಶ ಪಲ್ಲೇದ, ಮಹೇಶ, ವಿನಾಯಕ, ಅನಾದ, ರಾಹುಲ್ ರೆಡ್ಡಿ, ಪ್ರೇಮಾ ರೆಡ್ಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net