ನಾಗನೂರ ಪಿ.ಕೆ ಪಿಕೆಪಿಎಸ್‌ಗೆ ಪರಪ್ಪ ಅಧ್ಯಕ್ಷ

2Athanigramin1
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ನಾಗನೂರ ಪಿಕೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಪರಪ್ಪ ಸವದಿ, ಉಪಾಧ್ಯಕ್ಷರಾಗಿ ಹನುಮಂತ ಹುದ್ದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಘವೇಂದ್ರ ನೂಲಿ ಘೋಷಿಸಿದರು.

ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಸಹಕಾರಿ ನೆಚ್ಚಿನ ಕ್ಷೇತ್ರವಾಗಿದ್ದು, ಸಂಘದ ಅಭಿವೃದ್ಧಿ ಜತೆಗೆ ಸದಸ್ಯರ ಹಿತ ಕಾಪಾಡುವಲ್ಲಿ ಶ್ರಮಿಸುತ್ತೇನೆ. ಸಹಕಾರಿ ಸಂಘಗಳು ಹುಟ್ಟುವ ಮುಂಚೆ ಹೆಚ್ಚಿನ ಬಡ್ಡಿ ದರದಲ್ಲಿ ರೈತರು ಕೃಷಿ ಸಾಲ ಪಡೆಯುತ್ತಿದ್ದರು. ಸಾಲ ಮತ್ತು ಬಡ್ಡಿ ಸಕಾಲದಲ್ಲಿ ಮರುಪಾವತಿಸಲು ಹರಸಾಹಸ ಪಡುತ್ತಿದ್ದರು. ಶಾಸಕ ಲಕ್ಷ್ಮಣ ಸವದಿ ಅವರು ಸಹಕಾರಿ ಸಚಿವರಾದ ಮೇಲೆ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ವ್ಯವಸ್ಥೆ ತಂದ ಲವಾಗಿ ರೈತರು ನೆಮ್ಮದಿಯಿಂದ ಒಕ್ಕಲುತನ ಮಾಡುತ್ತಿದ್ದಾರೆ ಎಂದರು.

ನಿರ್ದೇಶಕರಾದ ರಾವಸಾಹೇಬ ಐಗಳಿ, ಗಂಗಪ್ಪ ಬಿಳ್ಳೂರ, ಬಸಪ್ಪ ತೇಲಿ, ಮಲ್ಲಪ್ಪ ಚೌಗಲಾ, ರಾಮಪ್ಪ ಗುಡೆನ್ನವರ, ಶ್ರೀಶೈಲ ಕಾಂಬಳೆ, ಕಲಗೌಡ ಪಾಟೀಲ, ಸಂಗಪ್ಪ ಅಂಬಿ, ಸಾವಿತ್ರಿ ಪಾಟೀಲ, ರೂಪಾ ಕರಾಳೆ, ಮುಖಂಡರಾದ ಭೀಮಪ್ಪ ಹಂಚಿನಾಳ, ಶಂಕರ ಚೌಗಲಾ, ರಾಮಗೌಡ ಪಾಟೀಲ, ಬಸಪ್ಪ ಗುಗ್ಗರಿ, ಕಾಶಿನಾಥ ಸವದಿ, ಗಂಗಯ್ಯ ಮಠಪತಿ, ಮುಖ್ಯಕಾರ್ಯನಿರ್ವಾಹಕ ಬಸವರಾಜ ತೇಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net