ಲಯನ್ಸ್‌ಕ್ಲಬ್ ಅಧ್ಯಕ್ಷರಾಗಿ ಗೀತಾ ಪದಗ್ರಹಣ

06 NMG 02
Published on

ನಾಗಮಂಗಲ : ಲಯನ್ಸ್‌ಕ್ಲಬ್ ಆಫ್ ನಾಗಮಂಗಲ ಸೆಂಟ್ರಲ್ ಅಧ್ಯಕ್ಷರಾಗಿ ಗೀತಾ ಬುಧವಾರ ಅಧಿಕಾರ ಸ್ವೀಕರಿಸಿದರು.ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಸ್ಥೆಯ ಬೆಳವಣಿಗೆಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ದುಡಿಯುವೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಜನಸೇವೆ ಮಹತ್ವ ಅರಿತಿದ್ದೇನೆ. ಸಂಸ್ಥೆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಮತ್ತಿತರ ಸೇವೆಗಳನ್ನು ತಾಲೂಕಿನ ಜನರಿಗೆ ನೀಡುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

ಡಯಾಲಿಸಿಸ್ ಕೇಂದ್ರ: ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ದೇವೇಗೌಡ ಮಾತನಾಡಿ, ನೊಂದವರ, ಅಶಕ್ತರ ಧ್ವನಿಯಾಗಿ ಲಯನ್ಸ್ ಸೇವೆ ಮಾಡುತ್ತಿದೆ ಎಂದರು. ತಾಲೂಕಿನಲ್ಲಿ ಬಡ ರೋಗಿಗಳಿಗಾಗಿ ಒಂದು ಡಯಾಲಿಸಿಸ್ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಚಲುವರಾಯಸ್ವಾಮಿ, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ ಗೌಡ, ಮುಖಂಡರಾದ ಸುನೀಲ್‌ಲಕ್ಷ್ಮೀಕಾಂತ, ರಾಜೇಶ್, ದೇವರಾಜು, ಪ್ರಸನ್ನ, ತಿಮ್ಮೇಗೌಡ, ಎನ್.ಟಿ.ಕೃಷ್ಣಮೂರ್ತಿ ಇತರರು ಇದ್ದರು.

===========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net