ಗುಜ್ಜಾಡಿ ಕ್ಷೇತ್ರದಲ್ಲಿ ನಾಗಮಂಡಲೋತ್ಸವ ಸಂಪನ್ನ

naga
Published on

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೇರೆ ಶ್ರೀ ನಾಗ ದೇವಸ್ಥಾನದಲ್ಲಿ ನಾಗಮಂಡಲೋತ್ಸವ ಸುವರ್ಣ ಮಹೋತ್ಸವ ಪ್ರಯುಕ್ತ ಅಷ್ಟ ಪವಿತ್ರ ನಾಗಮಂಡಲೋತ್ಸವ ಪ್ರಧಾನ ತಂತ್ರಿ ಬಲರಾಮ ಸೋಮಯಾಜಿ ಕೋಟ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಅಡಿಗ ನಾಯಕವಾಡಿ ನೇತೃತ್ವದಲ್ಲಿ ನಾಗಪಾತ್ರಿ ರವಿರಾಜ್ ಭಟ್ ಅಂಪಾರು ಹಾಗೂ ವಾಸುದೇವ ವೈದ್ಯ ಮತ್ತು ಗೋಳಿಯಂಗಡಿ ಬಳಗದ ನೇತೃತ್ವದಲ್ಲಿ ಸೋಮವಾರ ಸಂಪನ್ನಗೊಂಡಿತು.

ಸಂಜೆ ಹಾಲಿಟ್ಟು ಸೇವೆ, ರಾತ್ರಿ ಅಷ್ಟಪವಿತ್ರ ನಾಗಮಂಡಲೋತ್ಸವ, ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಸಿ.ಕುಂದರ್ ಪ್ರಸಾದ ಸ್ವೀಕರಿಸಿದರು.

ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಸೇವಾ ಸಮಿತಿ ಸದಸ್ಯರು, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಗೌರವಾಧ್ಯಕ್ಷ ಮಡಿಕಲ್ ಸುರೇಶ ಖಾರ್ವಿ, ಕಾರ್ಯದರ್ಶಿ ರಾಘವೇಂದ್ರ ವಿ.ಮೇಸ್ತ ಮೊದಲಾದವರಿದ್ದರು.

ಪೊಲೀಸ್ ಬಂದೋಬಸ್ತ್

ಅವಿಭಜಿತ ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ತ್ರಾಸಿ-ಗಂಗೊಳ್ಳಿ ರಸ್ತೆ ನಾಯಕವಾಡಿಯಿಂದ ಬಾವಿಕಟ್ಟೆ ತನಕ ಭಾರಿ ಜನ ಹಾಗೂ ವಾಹನ ದಟ್ಟಣೆ ಉಂಟಾಗಿತ್ತು. ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಸವಿತ್ರತೇಜ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಹರೀಶ್ ಆರ್. ಮತ್ತು ಬಸವರಾಜ್ ಕನಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು. ರಾತ್ರಿ ನಾಗಮಂಡಲ ವೀಕ್ಷಣೆಗೆ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net