ನಾಗಮಂಡಲ ಚಪ್ಪರ ಮುಹೂರ್ತಕ್ಕೆ ಬಂದ ನಾಗರಾಜ!

naga mandala
Published on

ಕೊಕ್ಕರ್ಣೆ: ನಾಲ್ಕೂರು ಗ್ರಾಮದ ಮಿಯ್ಯರು ದೊಡ್ಮನೆ ಕುಟುಂಬಸ್ಥರಿಂದ ಫೆ.22ರಂದು ನಡೆಯುವ ಚತುಃಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಪೂರ್ವಭಾವಿ ಚಪ್ಪರ ಮೂಹೂರ್ತದ ಸಂದರ್ಭ ನಾಗರಹಾವು ಕಾಣಿಸಿಕೊಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ನಾಗಬನದಿಂದ ಬಂದ ನಾಗರಹಾವು ನೇರವಾಗಿ ನಾಗಮಂಡಲ ನಡೆಯುವ ಸ್ಥಳಕ್ಕೆ ಪ್ರದಕ್ಷಿಣೆ ಹಾಕಿ ನಂತರ ನಾಗಬನದೊಳಗೆ ಸೇರಿತು. ನಾಗಮಂಡಲದ ಸೇವಾಕರ್ತ ಮಿಯ್ಯರು ದೊಡ್ಮನೆ ಪ್ರವೀಣ್ ಶೆಟ್ಟಿ ಪ್ರತಿಕ್ರಿಯಿಸಿ, ಹಲವಾರು ವರ್ಷಗಳ ಇತಿಹಾಸವಿರುವ ಮಿಯ್ಯರು ದೊಡ್ಮನೆ ಪಂಚಾಯಿತಿ ಕಟ್ಟೆಯಲ್ಲಿ ನ್ಯಾಯ ಒದಗಿಸುತ್ತಿದ್ದರು.

ಕೃಷಿ ಕುಟುಂಬವಾಗಿದ್ದು, ಕಾಲಕ್ರಮೇಣ ಕುಟುಂಬಸ್ಥರಿಗೆ ಹಲವು ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಅಷ್ಟಮಂಗಲದ ಪ್ರಶ್ನೆಯಲ್ಲಿ ನಾಗಮಂಡಲ ಸೇವೆ ಮಾಡಬೇಕೆಂದು ಹರಕೆ ಪ್ರಯುಕ್ತ ಸೇವೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net