

ಬೆಂಗಳೂರು: ವಿಜಯ ಕರ್ನಾಟಕ ಬೆಂಗಳೂರಿನ ಕಚೇರಿಯಲ್ಲಿ ಹಿರಿಯ ಡಿಸೈನರ್-ಚಿತ್ರ ಕಲಾವಿದರೂ ಆಗಿದ್ದ ಶ್ರೀ ನಾಗಲಿಂಗಪ್ಪ ಆರ್ ಬಡಿಗೇರ ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಡಿಗೇರ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದವರಾಗಿದ್ದರು. ಸ್ನೇಹಜೀವಿ ಆಗಿದ್ದ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.