ಶ್ರೀ ನಾಗದೇವತೆ ದೇವಸ್ಥಾನದಲ್ಲಿ ಷಷ್ಠಿ ಪೂಜೆ

nagadevathe
Published on

ಕುಶಾಲನಗರ:

ಮಾರುಕಟ್ಟೆ ರಸ್ತೆಯಲ್ಲಿರುವ ಶ್ರೀ ನಾಗದೇವತೆ ದೇವಸ್ಥಾನದಲ್ಲಿ ಶ್ರೀ ನಾಗದೇವತಾ ಸೇವಾ ಸಮಿತಿ ಟ್ರಸ್ಟ್, ಯುವಕ ಸಂಘ ಮತ್ತು ಮಹಿಳಾ ಸಂಘದ ವತಿಯಿಂದ 17ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಗಣಪತಿ ಹೋಮ, ಪಂಚಮಿ ಪೂಜೆ, ಅಭಿಷೇಕ, ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಗಿತ್ತು.

ಶನಿವಾರ ಶ್ರೀ ಸ್ವಾಮಿಗೆ ಷಷ್ಠಿ ಪೂಜೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನದಾನ ನಡೆಸಲಾಯಿತು. ಸಂಜೆ ರಂಗಪೂಜೆ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀ ನಾಗದೇವತಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಮಣಿಕಂಠ ಎಂ., ಕಾರ್ಯದರ್ಶಿ ನಾಣಯ್ಯ, ಖಜಾಂಚಿ ಗಣೇಶ್, ಪ್ರಮುಖರಾದ ವಿನೋದ್, ಮಧು, ಪುಟ್ಟ, ಲೋಕೇಶ್, ಲಕ್ಷö್ಮಣ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net