ನಾಗ ಸುಬ್ರಹ್ಮಣ್ಯ ಶಿಲಾ ಪ್ರತಿಮೆ ಸ್ಥಾಪನೆ

1 KMP 04
ಕಂಪ್ಲಿ ಸಕ್ಕರೆ ಕಾರ್ಖಾನೆಯ ಮುಕ್ತಿನಾಥೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪನೆಗೊಂಡ ನಾಗಸುಬ್ರಹ್ಮಣ್ಯ ಶಿಲಾ ಪ್ರತಿಮೆ.
Published on

ಕಂಪ್ಲಿ: ಇಲ್ಲಿನ ಸಕ್ಕರೆ ಕಾರ್ಖಾನೆಯ ಶ್ರೀಮುಕ್ತಿನಾಥೇಶ್ವರ ದೇವಸ್ಥಾನ ಆವರಣದಲ್ಲಿ ಹರಗಿನದೋಣಿಯ ಪಂಚವಣಗಿ ಮಠದ ಸಿದ್ಧಲಿಂಗ ಶಿವಾಚಾರ್ಯರು ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ನಾಗ ಸುಬ್ರಹ್ಮಣ್ಯ ಶಿಲಾಪ್ರತಿಮೆ ಪ್ರತಿಷ್ಠಾಪಿಸಿದರು.

ಕಂಪ್ಲಿಯ ಕಲ್ಯಾಣಚೌಕಿಮಠದ ಬಸವರಾಜಶಾಸ್ತ್ರಿ ಹಾಗೂ ಸಂತೆ ಕೂಡ್ಲೂರಿನ ವೇದಪಾಠಶಾಲೆ ಅಧ್ಯಾಪಕ ಜಗದೀಶ್ವರಯ್ಯ ಸ್ವಾಮೀಜಿ ಪೌರೋಹಿತ್ಯದಲ್ಲಿ ಗಣಹೋಮ, ವಾಸ್ತುಹೋಮ, ಸುಬ್ರಹ್ಮಣ್ಯ ಹೋಮ ಸೇರಿ ನಾನಾ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮ, ಪ್ರಾಣಪ್ರತಿಷ್ಠಾಪನೆ ಕಾರ್ಯಗಳು ನಡೆದವು.

ಭಕ್ತರಾದ ಎಸ್.ಎಂ.ನಾಗರಾಜಸ್ವಾಮಿ, ಅರವಿ ಬಸವನಗೌಡ, ಭಟ್ಟ ಪ್ರಸಾದ್, ಎಸ್.ಎಂ.ಸಾವಿತ್ರಿ, ಡಿ.ಮೌನೇಶ, ಕೆ.ಎಂ.ಹೇಮಯ್ಯಸ್ವಾಮಿ, ವಾಲಿಕೊಟ್ರಪ್ಪ, ವೀರಯ್ಯ ಸಾಲಿಮಠ, ಕೆ.ಎಂ.ವಾಗೀಶ್, ಟಿ.ಕೊಟ್ರೇಶ್, ಬಿ.ರವೀಂದ್ರನಾಥ ಶ್ರೇಷ್ಠಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net