ಶ್ರದ್ಧಾ, ಭಕ್ತಿಯ ನಾಗಪೂಜೆ

RONA
. ರೋಣದ ರೋಣಮ್ಮ ದೇವಿ ದೇವಸ್ಥಾನದ ಬಳಿ ನಾಗದೇವತೆಗಳಿಗೆ ಮಹಿಳೆಯರು ಹಾಲು ಎರೆದು ಪೂಜೆ ಸಲ್ಲಿಸಿದರು.
Published on

ರೋಣ: ಪಟ್ಟಣ ಹಾಗೂ ತಾಲೂಕಿನಾದ್ಯಂತ ಭಾನುವಾರ ನಾಗಪೂಜೆಯ ಸಡಗರ ಮನೆಮಾಡಿತ್ತು. ಪಟ್ಟಣದ ರೋಣಮ್ಮದೇವಿ ದೇವಸ್ಥಾನದ ಬಳಿಯ ನಾಗದೇವತೆಗಳಿಗೆ ಮಕ್ಕಳು, ಮಹಿಳೆಯರು ನೈವೇದ್ಯ ಅರ್ಪಿಸಿದರು.

ಎಳ್ಳುಂಡಿ, ಸಜ್ಜೆ, ಗೋಧಿ, ಶೇಂಗಾ ಉಂಡಿ ಸೇರಿದಂತೆ ವಿವಿಧ ಬಗೆಯ ಕಾಳುಗಳನ್ನಿಟ್ಟು ಕುಟುಂಬ ಹಾಗೂ ಆತ್ಮೀಯರ ಹೆಸರು ಹೇಳಿ ಹಾಲು ಹಾಕಲಾಯಿತು. ನಾಗರಪಂಚಮಿ ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲು ಎರೆದು ಆಚರಿಸುವ ಹಬ್ಬವಾಗಿದೆ. ನಾಗಪ್ಪನಿಗೆ ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ತಂಬಿಟ್ಟು, ಹಸಿ ಅಕ್ಕಿ ಮತ್ತ ಬೆಲ್ಲ ಸೇರಿಸಿ ಮಾಡಿದ ತಂಬಿಟ್ಟಿನ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net