

ಉಗರಗೋಳ: ವೇದಾಂತ ಹಾಗೂ ಅಧ್ಯಾತ್ಮದ ತಿರುಳನ್ನು ನಾಡಿನ ಪ್ರತಿಯೊಬ್ಬ ನಾಗರಿಕನಿಗೆ ಮನ ಮುಟ್ಟುವಂತೆ ತಿಳಿಸಿದವರು ಕನಕದಾಸರು ಎಂದು ದೇವಸ್ಥಾನ ಪ್ರಾಧಿಕಾರದ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ ಹೇಳಿದರು.
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರು ಮನುಷ್ಯನನ್ನು ಸನ್ಮಾರ್ಗದ ಕಡೆಗೆ ಕೈಹಿಡಿದು ನಡೆಸಿದವರು ಎಂದರು.
ಆರ್.ಎಸ್.ಸವದತ್ತಿ, ರಾಜು ಬೆಳವಡಿ, ವಿ.ಆರ್.ನೀಲಗುಂದ, ರಂಜಿತ ಭಜಂತ್ರಿ, ಆನಂದ ಗೋರವನಕೊಳ್ಳ, ಚನ್ನಪ್ಪ ಮದ್ಲಿ, ಡಿ.ಡಿ. ನಾಗನಗೌಡ್ರ, ಮಾಯಪ್ಪ ಅಳಗವಾಡಿ, ಸತೀಶ ಚಿರಚನವರ, ತಿಪ್ಪಣ್ಣ ಜಗಲಿ, ಫಕೀರಪ್ಪ ಯಕ್ಕುಂಡಿ, ರಾಜು ತಾರೀಹಾಳ, ಮೌಳೇಶ ಸುಣಗಾರ, ಅನಿಲ ಗುಡಿಮನಿ, ಪಂಡಿತ ಯಡೂರಯ್ಯ ಹಾಗೂ ದೇವಸ್ಥಾನ ಸಿಬ್ಬಂದಿ ಉಪಸ್ಥಿತರಿದ್ದರು.