

ಹುಬ್ಬಳ್ಳಿ: ‘ಕರ್ನಾಟಕ ಸಂಭ್ರಮ 50’ ನಿಮಿತ್ತ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹುಬ್ಬಳ್ಳಿ ಶಹರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅವ್ವಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ದತ್ತಿ ಉಪನ್ಯಾಸ ಹಾಗೂ ನಾಡು -ನುಡಿ ನೃತ್ಯ ರೂಪಕ ಸ್ಪರ್ಧೆಯನ್ನು ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ನ.1ರಂದು ಸಂಜೆ 4.30 ಕ್ಕೆ ಏರ್ಪಾಟಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ಅಧ್ಯಕ್ಷ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು ಎಂದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ಪಾಲಿಕೆ ಸದಸ್ಯರಾದ ಮೀನಾಕ್ಷಿ ವಂಟಮೂರಿ, ರೂಪಾ ಶೆಟ್ಟಿ, ಎಸ್ಜೆಎಂವಿಎಸ್ ಮಹಿಳಾ ಕಾಲೇಜ್ನ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಶಿವಲೀಲಾ ವೈಜನಾಥ, ಸಂಗೀತ ಕಲಾವಿದೆ ವೈಷ್ಣವಿ ಹಾನಗಲ್ ಅತಿಥಿಗಳಾಗಿ ಆಗಮಿಸುವರು. ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ರಾಷ್ಟ್ರಕ್ಕೆ ದ್ವೀತಿಯ ಸ್ಥಾನ ಪಡೆದ ಸೃಷ್ಟಿ ಸುನೀಲ್ ಕುಲಕರ್ಣಿ ಅವನ್ನು ಸನ್ಮಾನಿಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, 12 ಮಹಿಳಾ ಮಂಡಳಗಳು ಭಾಗವಹಿಸಲಿವೆ. ವಿವಿಧ ಕನ್ನಡ ಗೀತೆಗಳ ನೃತ್ಯ ರೂಪಕ ನಡೆಯಲಿದೆ. ವಿವಿಧ ದತ್ತಿ ಉಪನ್ಯಾಸ ಕೂಡ ಜರುಗಲಿದೆ ಎಂದರು.
ಎಸ್.ಕೆ. ಆದಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ಟರ್, ಗಿರಿಜಾ ಚಿಕ್ಕಮಠ, ಜಯಶ್ರೀ ಬೇವೂರ, ರಾಜಶೇಖರ ಇಂಡಿ, ಶಕುಂತಲಾ ಹೂಗಾರ ಸುದ್ದಿಗೋಷ್ಠಿಯಲ್ಲಿದ್ದರು.