ಅ.15ಕ್ಕೆ ನಡೂರು ಶಿವರಾಮ ಶೆಟ್ಟಿ ಜನ್ಮಶತಾಬ್ಧಿ ಸಮಾರಂಭ

udp-srivani
Published on

ಉಡುಪಿ: ನಡೂರು ಶ್ರೀವಾಣಿ ವಿದ್ಯಾಭಿವೃದ್ಧಿ ಸಂ ಸಂಸ್ಥಾಪಕ ಬ್ರಹ್ಮಾವರ ಗಾಳಿಮನೆ ನಡೂರು ಶಿವರಾಮ ಶೆಟ್ಟಿ ಜನ್ಮಶತಾಬ್ಧಿ ಉದ್ಘಾಟನಾ ಸಮಾರಂಭ ಅ.15ರಂದು ಮದ್ಯಾಹ್ನ 2ಕ್ಕೆ ಶ್ರೀವಾಣಿ ಪ್ರೌಢಶಾಲೆಯ ಶಿವಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಬಿ. ಭೋಜ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲಿಟ್ಲ ರಾಕ್​ ಶಾಲೆಯ ನಿರ್ದೆಶಕ ಪ್ರೊ. ಮ್ಯಾಥ್ಯೂ ನೈನಾನ್​ ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಶಾಸಕ ಕಿರಣ್​ ಕುಮಾರ್​ ಕೊಡ್ಗಿ ಉಪಸ್ಥಿತರಿರುವರು. ಬೆಂಗಳೂರು ವಿಐಪಿ ಶಾಲೆ ಪ್ರಾಂಶುಪಾಲೆ ಸಾಕಮ್ಮ ಶೆಟ್ಟಿ ಅತಿಥಿಗಳಾಗಿರುವರು. ಉದ್ಯಮಿ ರಾಜಾರಾಮ ಶೆಟ್ಟಿ ಸಂಸ್ಮರಣೆ ನೆರವೇರಿಸಲಿದ್ದಾರೆ. ಗುರು ನರಸಿಂಹ ದೇವಸ್ಥಾನ ಅಧ್ಯಕ್ಷ ಡಾ. ಕೆ.ಎಸ್​. ಕಾರಂತ ನಿವೃತ್ತರಿಗೆ ಸನ್ಮಾನ ಮಾಡಲಿದ್ದಾರೆ. ಪ್ರಮೋದ್​ ಕುಮಾರ್​ ಶೆಟ್ಟಿ ಮತ್ತು ದೀಪಾ ಹೆಗ್ಡೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ ಎಂದರು.

ಶಿವರಾಮ ಶೆಟ್ಟಿ ಅವರು 1950ರಲ್ಲಿ ಶ್ರೀವಾಣಿ ಪ್ರಾಥಮಿಕ ಶಾಲೆ ಹಾಗೂ 1984ರಲ್ಲಿ ನಡೂರು ಮತ್ತು ಮಟಪಾಡಿಯಲ್ಲಿ 2 ಪ್ರೌಢಶಾಲೆ ಪ್ರಾರಂಭಿಸಿದ್ದರು. 1988ರಲ್ಲಿ ಶ್ರೀವಾಣಿ ಅನುದಾನಿತ ವಿದ್ಯಾರ್ಥಿ ನಿಲಯ ಆರಂಭಿಸಲಾಗಿದ್ದರು. ಇವರ ಪರಿಶ್ರಮದ ಲವಾಗಿ ಶ್ರೀವಾಣಿ ವಿದ್ಯಾಭಿವೃದ್ಧಿ ಸಂ ಸಂಸ್ಥೆ ಹುಟ್ಟುಕೊಂಡಿದ್ದು, ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ರಾಜಾರಾಮ್​ ಶೆಟ್ಟಿ, ವಿಠಲ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಸದಸ್ಯರಾದ ವಿಶ್ವನಾಥ ಶೆಟ್ಟಿ, ಅಶೋಕ್​ ಕುಮಾರ್​ ಶೆಟ್ಟಿ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net